BlogCulturalEconomyEntertainmentFashionHighlightsHuman storiesLifestyleLocal newsOthersSuccess storiesTop StoriesTrending

ಬೈಂದೂರು: ಸುಮುಖ ಸರ್ಜಿಕಲ್ಸ್ ನಲ್ಲಿ ದೀಪಾವಳಿ ಹಬ್ಬ, ಆಯುಧ ಪೂಜೆ

Aware others:

ಕುಂದಾಪುರ: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದಂತೆ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಇರುವ ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸಂಭ್ರಮದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.

ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್, ಸುಮುಖ ಎಜುಕೆಶನಲ್ ಟ್ರಸ್ಟ್  ಸಿದ್ಧಾಪುರ ಮತ್ತು  ಜ್ಞಾನ ಸರಸ್ವತಿ ಪಿಯು ಕಾಲೇಜಿನ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ ಹಾಗೂ ಅವರ ಧರ್ಮಪತ್ನಿ ಶಮ್ಮಿ ಎಸ್ ಶೆಟ್ಟಿ ಅವರು ಲಕ್ಷ್ಮೀ ಪೂಜೆ ನಡೆಸಿದರು. ಬಳಿಕ ಸಂಸ್ಥೆಯ ಹಾಗೂ ಸಿಬ್ಬಂದಿಗಳ ವಾಹನ ಪೂಜಾ ಕಾರ್ಯಕ್ರಮ ನಡೆಯಿತು.

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಸುರೇಶ್ ಬಟವಾಡಿ ಮೊದಲಾದವರು ಭೇಟಿ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೆಶಕರಲ್ಲಿ ಒಬ್ಬರಾದ ಯು. ಪಾಂಡುರಂಗ ಪಡಿಯಾರ್ ಸೇರಿದಂತೆ ಸುಮುಖ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಎಲ್ಲಾ ಆಡಳಿತ ಮತ್ತು ನೌಕರ ವೃಂದದವರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!