BlogEducationEntertainmentFashionGovernmentHighlightsHuman storiesLifestyleLocal newsNational NewsOthersPoliticsProtestReligionState newsTop StoriesTrending

ಸಿಜೆಐ ಗವಾಯಿ ಮೇಲಿನ ದಾಳಿ ಕೇವಲ ನ್ಯಾಯಾಂಗದ ಮೇಲಿನ ದಾಳಿಯಲ್ಲ, ಸಂವಿಧಾನದ ಮೇಲಿನ ದಾಳಿ – ಚಂದ್ರಶೇಖರ್ ಶೆಟ್ಟಿ

Aware others:

ಕುಂದಾಪುರ: ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಸನಾತನಿ ಎಂದು ಹೇಳಿಕೊಂಡ ವಕೀಲ ಎಸೆಯಲು ಯತ್ನಿಸಿದ ಬೂಟು ದಾಳಿ ಪ್ರಕರಣ ನ್ಯಾಯಾಂಗದ ಮೇಲಿನ ದಾಳಿ ಮಾತ್ರವಲ್ಲ; ಅದು ಜಗತ್ತಿ ಅತೀ ದೊಡ್ಡ ಪ್ರಜಾಪ್ರಭುತ್ವದ ದೇಶಗಳಲ್ಲಿ ಒಮದಾಘಿರುವ ಭಾರತದ ಪ್ರಜಾಸತ್ತೆಯ ಮೇಲೆ ಮತ್ತು ಸಂವಿಧಾನದ ಮೇಲೆ ನಡೆದ ಹೇಯ ದಾಳಿ ಎಂದು ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಚಂದ್ರಶೇಖರ ಶೆಟ್ಟಿ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ ಆದರೆ ದೇಶದ ಅತ್ಯನ್ನತ ಹುದ್ದೆಯಲ್ಲಿ ಕುಳಿತಿರುವ “ದಲಿತ ಹಾಗೂ ಹಿಂದುಳಿದ ವರ್ಗದ ನಾಯಕರು ಕನಿಷ್ಠ ಆ ಘಟನೆ ಖಂಡಿಸಿ ಟ್ವೀಟ್ ಕೂಡ ಮಾಡಿಲ್ಲ” ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ ಎಂದಿರುವ ಅವರು, ಅಂತಹಾ ನಾಯಕರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆಯೇ ಎನ್ನುವ ಅನುಮಾನ ಮೂಡಿದೆ ಎಂದಿದ್ದಾರೆ.

ಇಂದು ಅಧಿಕಾರದ ಪ್ರತಿಯೊಂದು ಹಂತವೂ ಮನುವಾದದ ಮೌನ ನಿಯಮಗಳಿಗೆ ಒಳಪಟಟ್ಟಿದೆಯೇ? ಅಂಬೇಡ್ಕರ್ ಕನಸಿನ ಸಮಾನತೆಯ ಭಾರತ ಈಗ  ಅಸಮಾನತೆ ಸಾರುವ ಮನುಭಾರತದತ್ತ ಜಾರುತ್ತಿರುವ ಆತಂಕ ಎದುರಾಗಿದೆ. ಈ ವ್ಯವಸ್ಥೆಯಲ್ಲಿ ಹಿಂದುಳಿದ, ದಲಿತ ವರ್ಗದ ನಾಯಕರು ಮನುವಾದಿಗಳ ಕೈಗೊಂಬೆಗಳಾಗಿ ಅವರ ಧ್ವನಿ ಬಂಧಿತವಾಗತೊಡಗಿದೆ. ಅಂಬೇಡ್ಕರ್ ಭಾರತದ ಭವಿಷ್ಯ ಅಪಾಯದಂಚಿಗೆ ತಲುಪುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಇನ್ನಾದರೂ ನಾವೆಲ್ಲರೂ ಎಚ್ಚೆತ್ತುಕೊಂಡು ಸ್ವಾತಂತ್ರ್ಯದ ಮಂಪರಿನಲ್ಲಿದ್ದವರನ್ನು ಎಚ್ಚರಿಸಬೇಕಿದೆ ಎಂದು ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.


Aware others:

One thought on “ಸಿಜೆಐ ಗವಾಯಿ ಮೇಲಿನ ದಾಳಿ ಕೇವಲ ನ್ಯಾಯಾಂಗದ ಮೇಲಿನ ದಾಳಿಯಲ್ಲ, ಸಂವಿಧಾನದ ಮೇಲಿನ ದಾಳಿ – ಚಂದ್ರಶೇಖರ್ ಶೆಟ್ಟಿ

  • Ondu kannige sunna ondu kannige benne

    Reply

Leave a Reply

Your email address will not be published. Required fields are marked *

error: Content is protected !!