ಉಡುಪಿ ಜಿಲ್ಲೆಯ ಎರಡನೇ ಲಾ ಕಾಲೇಜು ಓಕ್‌ವುಡ್ ಕಾನೂನು ವಿದ್ಯಾಲಯ ಆರಂಭ – ಎ. ಅಭಿನಂದನ್ ಶೆಟ್ಟಿ
ಕುಂದಾಪುರ: ಸಿ.ಬಿ.ಎಸ್.ಇ ಪೋರ್ಟ್ ಗೇಟ್ ಎಜುಕೇಶನಲ್ ಟ್ರಸ್ಟ್ (ರಿ) 2012 ವತಿಯಿಂದ ಕುಂದಾಪುರದಲ್ಲಿ ಓಕ್ ವುಡ್ ಕಾನೂನು ವಿದ್ಯಾಲಯ ಎಂಬ ಮೊದಲ ಕಾನೂನು ವಿದ್ಯಾಲಯ ಆರಂಭಗೊಂಡಿದೆ ಎಂದು ಸಂಸ್ಥೆಯ ಆಡಳಿತ ಟ್ರಸ್ಟೀ ಅಭಿನಂದನ್ ಎ. ಶೆಟ್ಟಿ ಹೇಳಿದರು.

ಅವರು ಮಂಗಳವಾರ ಹೊಟೇಲ್ ಹರಿಪ್ರಸಾದ್ ಗ್ರ್ಯಾಂಡ್ ನಲ್ಲಿ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದರು.
CBSE Fort Gate Education Trust (R) 2012ರಿಂದ ಕುಂದಾಪುರ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದ್ದು ಯುರೋ ಕಿಡ್ಸ್ ಇಂಟರ್ನ್ಯಾಷನಲ್ ಪಿ ಸ್ಕೂಲ್ ಹಾಗೂ ಓಕ್‌ವುಡ್ ಇಂಡಿಯನ್ ಸ್ಕೂಲ್ ಎಂಬ ಸಂಸ್ಥೆಯನ್ನು ನಡೆಸುತ್ತಿದೆ. ಶಿಕ್ಷಣವನ್ನು ನೀಡುತ್ತಿದ್ದು ಕಳೆದ ಎರಡು ಸಾಲಿನಲ್ಲಿ 100ರಷ್ಟು ಪ್ರಥಮದರ್ಜೆ (First Class) ಫಲಿತಾಂಶವನ್ನು ನೀಡಿದ ಹೆಗ್ಗಳಿಕೆ ನಮ್ಮ ಸಂಸ್ಥೆಯದ್ದು, ಗುಣಮಟ್ಟದ ಶಿಕ್ಷಣ ನಮ್ಮ ಉದ್ದೇಶ ಆಗಿರುತ್ತದೆ, ಹಾಗೂ ಯಾವುದೇ ದೇಣಿಗೆ ಪಡೆಯದೆ ನಡೆಸುತ್ತಿರುವುದು ನಮ್ಮ ಹೆಗ್ಗಳಿಕೆ. ನಮ್ಮ, ಟ್ರಸ್ಟ್ ನ ವತಿಯಿಂದ ಇದೀಗ ನೂತನ ಓಕ್‌ವುಡ್ ಕಾನೂನು ವಿಧ್ಯಾಲಯ ಪ್ರಸಕ್ತ ಸಾಲಿನಲ್ಲಿ ಆರಂಭಗೊಳ್ಳಲಿದೆ. ಇದು ಉಡುಪಿ ಜಿಲ್ಲೆಯ ಎರಡನೆಯ ಕಾನೂನು ವಿಧ್ಯಾಲಯವಾಗಿದ್ದು, ಕುಂದಾಪುರ ಬೈಂದೂರು, ಉತ್ತರ ಕನ್ನಡ ಜಿಲ್ಲೆಯ ಮತ್ತು ಮಲೆನಾಡಿನ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕಾನೂನು ಪದವಿಗೆ ಬಹಳಷ್ಟು ಬೇಡಿಕೆ ಇದ್ದು ನಮ್ಮ ಭಾಗದ ವಿಧ್ಯಾರ್ಥಿಗಳಿಗೆ ದೂರದ ಉಡುಪಿ, ಮಂಗಳೂರು, ಬೆಂಗಳೂರಿಗೆ ಹೋಗುವಂತಹ ಪರಿಸ್ಥಿತಿ ಇದ್ದು ಇದನ್ನು ಅರಿತ ನಮ್ಮ ಸಂಸ್ಥೆ ನೂತನ ಕಾನೂನು ಕಾಲೇಜನ್ನು ಆರಂಭಿಸಲು ನಿರ್ಧಾರ ಕೈಗೊಂಡಿತು. ಗುಣಮಟ್ಟದ ಕಾನೂನು ಶಿಕ್ಷಣ ಮತ್ತು ವಕೀಲ ವೃತ್ತಿಗೆ ಬೇಕಾದ ಪೂರಕ ತರಬೇತಿಯನ್ನು ನೀಡುವ ಉದ್ದೇಶ ಹೊಂದಿದ್ದೇವೆ. ದೂರದ ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 2025-26ನೇ ಸಾಲಿನ ಆರಂಭದಲ್ಲಿ ಮೂರು ವರ್ಷದ ಎಲ್. ಎಲ್. ಬಿ. ಕೋರ್ಸ್ ಆರಂಭವಾಗಲಿದ್ದು, 60 ಸೀಟುಗಳೊಂದಿಗೆ ಪ್ರಾರಂಭಿಸಲು ನಮಗೆ ಅನುಮತಿ ಇರುತ್ತದೆ. ಮುಂದಿನ ವರ್ಷ ಐದು ವರ್ಷದ ಕೋರ್ಸ್ ಆರಂಭಿಸಲಿದ್ದೇವೆ. ಇದಕ್ಕೆ, ಕರ್ನಾಟಕ ರಾಜ್ಯದ ಕಾನೂನು ವಿಶ್ವವಿದ್ಯಾಲಯದಿಂದ ಅವಕಾಶ ಲಭಿಸಿದ್ದು, ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನವದೆಹಲಿ ಇದರ ಮಾನ್ಯತೆ ಪಡೆದುಕೊಂಡಿದ್ದೇವೆ. ನುರಿತ ಶಿಕ್ಷಕರನ್ನು ಈಗಾಗಲೇ ವಿಶ್ವವಿದ್ಯಾನಿಲಯ ನಿಯಮಾನುಸಾರ ಆಯ್ಕೆ ಮಾಡಿದ್ದು, ಅತಿಥಿ ಉಪನ್ಯಾಸಕರನ್ನು ವಿಶೇಷ ತರಬೇತಿಗಾರರನ್ನು ನಮ್ಮ ಸಂಸ್ಥೆ ಗುರುತಿಸಿದೆ. ಪಠ್ಯ ಹಾಗೂ ಪಠೇತರ ಚಟುವಟಿಕೆಗಳಿಗೆ ವಿಶೇಷ ಗಮನ ನೀಡಲಿದ್ದು ಶೀಘ್ರದಲ್ಲಿಯೇ ಸುಸಜ್ಜಿತ ಕ್ಯಾಂಪಸ್ ಅನ್ನು ಪ್ರಾರಂಭಗೊಳಿಸಲಿದ್ದೇವೆ. ಸುಸಜ್ಜಿತ ಕ್ಲಾಸ್ ರೂಮ್ ಗಳನ್ನು ಮೂಟ್ ಕೋರ್ಟ್ ಅತ್ಯಾಧುನಿಕ ಗ್ರಂಥಾಲಯ, ಸೆಮಿನಾರ್ ಹಾಲ್ ಗಳನ್ನು ನಮ್ಮ ಸಂಸ್ಥೆ ಹೊಂದಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪೋರ್ಟ್ ಗೇಟ್ ಎಜುಕೇಶನ್ ಟ್ರಸ್ಟ್ ಇದರ ಆಡಳಿತ ಟ್ರಸ್ಟಿ ಅಭಿನಂದನ್ ಎ. , ಟ್ರಸ್ಟ್ ನ ಕಾರ್ಯದರ್ಶಿ ನೀತಾ ಎ. ಶೆಟ್ಟಿ, ಟ್ರಸ್ಟಿಗಳಾದ ಬಿ. ಅರುಣ್ ಕುಮಾರ್ ಶೆಟ್ಟಿ, ಬಿಪಿಸಿಎಲ್ ನಿವೃತ್ತ ಜನರಲ್ ಮ್ಯಾನೇಜರ್ ದಿನಾಕರ್ ತೋನ್ನೆ, ಆಡಳಿತ ಅಧಿಕಾರಿ ಸಹನಾ ಶೆಟ್ಟಿ, ಹಾಗೂ ಪ್ರಾಂಶುಪಾಲೆ ಶ್ರುತಿ ಹೆಗ್ಡೆ ಉಪಸ್ಥಿತರಿದ್ದರು.
