ಕುಂದಾಪುರ: ಉಡುಪಿ ಜಿಲ್ಲಾ ಇಎಸ್ಐ ಆಸ್ಪತ್ರೆಗೆ ಟೆಂಡರ್ ಪ್ರಕ್ರಿಯೆ ಆರಂಭ
ಕುಂದಾಪುರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇಂದ್ರ ಸರಕಾರದಿಂದ ಮಂಜೂರಾಗಿರುವ 100 ಹಾಸಿಗೆಗಳ ಇ.ಎಸ್.ಐ. (ಉದ್ಯೋಗಿಗಳ ರಾಜ್ಯ ವಿಮಾ ನಿಗಮ” Employees’ State Insurance Corporation) ಆಸ್ಪತ್ರೆ ಮತ್ತು ವೈದ್ಯಾಧಿಕಾರಿಗಳು ಸೇರಿದಂತೆ, 32 ಸಿಬ್ಬಂದಿಗಳ ವಸತಿ ಸಂಕೀರ್ಣಕ್ಕೆ ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭವಾಗಿದೆ.

ನೂತನ ಆಸ್ಪತ್ರೆಯ ಯೋಜನಾ ವೆಚ್ಚ 150 ಕೋಟಿ ರೂಪಾಯಿ ಆಗಿದ್ದು, ಟೆಂಡರ್ ಗೆ ಆಗಸ್ಟ್ 25ರಂದು ಕೊನೆಯ ದಿನವಾಗಿದೆ. ಆಗಸ್ಟ್ 26ರ ನಂತರ ಟೆಂಡರ್ ತೆರೆಯುವ ಪ್ರಕಟಣೆಯನ್ನು ಇಲಾಖೆ ನೀಡಿದೆ.

ಬಹು ದಿನಗಳ ಬೇಡಿಕೆಯಾದ ESI ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾರ್ಮಿಕ ಸಚಿವ ಮನುಶುಕ್ಲ ಮಾಂಡವಿಯ, ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಮಂಜೂರಾತಿ ನೀಡಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ಕೊಟ್ಟಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇ.ಎಸ್.ಐ ಆಸ್ಪತ್ರೆ ಆರಂಭಗೊಂಡರೆ ಸಾವಿರಾರು ಉದ್ಯೋಗಿಗಳಿಗೆಮತ್ತು ಅವರ ಕುಟುಂಬಕ್ಕೆ ಆರೋಗ್ಯ ಭಾಗ್ಯ ದೊರೆಯಲಿದೆ
