BlogCulturalEconomyEducationEntertainmentFashionHighlightsHuman storiesLifestyleLocal newsOthersSuccess storiesTop StoriesTrendingWomen Care

ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಆಶ್ರಯದಲ್ಲಿ ದಿ| ಸುರೇಶ್ ಎಸ್. ಪೂಜಾರಿ ಪಡುಕೋಣೆ ಪ್ರಾಯೋಜಿತ 33ನೇ ವರ್ಷದ ವಿದ್ಯಾರ್ಥಿ ಸಹಾಯಧನ ವಿತರಣೆ ಮತ್ತು ಸಾಧಕರಿಗೆ ಸಮ್ಮಾನ

Aware others:

ಕುಂದಾಪುರ: ಉತ್ತಮ‌ ಭವಿಷ್ಯಕ್ಕೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಮುಖವಾಗಿ ಮಹಿಳೆಯರು ಶೈಕ್ಷಣಿಕವಾಗಿ ಸಶಕ್ತರಾದಾಗ  ಅದೃಢ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಕುಂದಾಪುರ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಸಮರ್ಥ ನಾಯಕರಾಗಿ ಶ್ರಮಿಸುತ್ತಿದ್ದಾರೆ ಎಂದು ಮುಂಬಯಿನ ಸುಖ್ ಸಾಗರ್ ಗ್ರೂಪ್ಸ್‌ನ ಭರತ್ ಎಸ್. ಪೂಜಾರಿ ಹೇಳಿದರು.

ಅವರು ರವಿವಾರ ಇಲ್ಲಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಆಶ್ರಯದಲ್ಲಿ ದಿ| ಸುರೇಶ್ ಎಸ್. ಪೂಜಾರಿ ಪಡುಕೋಣೆ ಅವರಿಂದ ಆರಂಭಗೊಂಡ 33ನೇ ವರ್ಷದ ವಿದ್ಯಾರ್ಥಿ ಸಹಾಯಧನ ವಿತರಣೆ ಮತ್ತು ಸಾಧಕರಿಗೆ ಸಮ್ಮಾನ ಕಾರ್‍ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಸನ್ಮಾನ‌ ಸ್ವೀಕರಿಸಿ ಮಾತನಾಡಿದ, ಪತ್ರಕರ್ತ ಅಶೋಕ್ ಪುತ್ತೂರು ಅವರು, ಬಿಲ್ಲವ ಸಮಾಜದ ಏಳಿಗೆಗೆ ಹಗಲಿರುಳು ದುಡಿಯುತ್ತಿರುವ ಕುಂದಾಪುರ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್‌ ಪೂಜಾರಿ ಬೀಜಾಡಿಯವರು ಒಬ್ಬ ಸಮರ್ಥ ಜನನಾಯಕ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲೂಕು ಬಿಲ್ಲವ ಸಮಾಜ ಸಂಘಟನೆಯ ಅಧ್ಯಕ್ಷ ಬೀಜಾಡಿ ಅಶೋಕ‌ ಪೂಜಾರಿ‌ ಮಾತನಾಡಿ, ನನಗೆ ಗೌರವ ಕೊಟ್ಟ ಸಮಾಜದ ಜೊತೆ ನಾವೆಲ್ಲರೂ ಜೊತೆಯಾಗಬೇಕು. ಕಷ್ಟಪಟ್ಟು ಹಿರಿಯರು ಕಟ್ಟಿದ ಬಿಲ್ಲವ ಸಮಾಜ ಸಂಘಟನೆ ಇಂದು ಬಲಿಷ್ಟವಾಗಿ ಬೆಳೆದಿದೆ. ಪ್ರತೀ ವರ್ಷ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುತ್ತಿರುವುದು ಅತೀವ ಸಂತಸ ತಂದಿದೆ. ಇದಕ್ಕೆಲ್ಲ ಕಾರಣ ಬಿಲ್ಲವ ಸಮಾಜದ‌ ಪ್ರೀತಿ. ಸಮಾಜದ ನಿರಂತರ ಬೆಂಬಲದಿಂದ ಎಲ್ಲರೂ ಮುಖ್ಯವಾಹಿನಿಗೆ ಬರಲು ಸಾಧ್ಯ. ಬಿಲ್ಲವ ಸಮಾಜದ ಏಳಿಗೆಗೆ ಬಿಲ್ಲವ ಸಂಘ ಬೆಂಬಲಕ್ಕೆ‌ ನಿಲ್ಲುತ್ತದೆ ಎಂದು ಹೇಳಿದರು.

ಚಂದ್ರ ಎಸ್ ಕೋಡಿ, ಟಿವಿ ನಿರೂಪಕ ಅಶೋಕ್ ಪುತ್ತೂರು, ಪತ್ರಕರ್ತ ಕೇಶವ ಸಸಿಹಿತ್ಲು, ಸಿ ಎ ವೈಷ್ಣವಿ ಎಂ ವಿ, ಮಮತಾ ಪೂಜಾರಿ ವಡ್ಡರ್ಸೆ, ಡಾ. ಗಾಯತ್ರಿ ಪಿ. ಟಿ., ಎ ಭಾಸ್ಕರ ಪೂಜಾರಿ ನಡೂರು, ಕೋಟಿ ಪೂಜಾರಿ ವಡ್ದರ್ಸೆ, ರಾಮ ಪೂಜಾರಿ ಮುಲ್ಲಿ ಮನೆ ಪಡುಕೋಣೆ, ರಾಜೇಂದ್ರ ಪೂಜಾರಿ ಬೆಚ್ಚಳ್ಳಿ ಮೊದಲಾದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಇದೇ ಸಂದರ್ಭ 225 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. 

ಬೆಂಗಳೂರು ದಯಾನಂದ ಸಾಗರ್ ವಿವಿ ಸಹಾಯಕ ಪ್ರಾಧ್ಯಾಪಕಿ ಡಾ| ಗಾಯತ್ರಿ, ಪತ್ರಕರ್ತ ಅಶೋಕ ಪುತ್ತೂರು, ವ್ಯಂಗ್ಯಚಿತ್ರಕಾರರಾದ ಕೇಶವ ಸಸಿಹಿತ್ಲು, ಚಂದ್ರ ಎಸ್. ಪೂಜಾರಿ, ಕೃಷಿಕರಾದ ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ರಾಮ ಪೂಜಾರಿ ಮುಲ್ಲಿಮನೆ, ಎ. ಭಾಸ್ಕರ ಪೂಜಾರಿ ನಡೂರು, ಸಮಾಜ ಸೇವಕರಾದ ಕೋಟಿ ಪೂಜಾರಿ, ಮಮತಾ, ಸಿಎ ರಕ್ಷಿತ್ ಕರ್ಕುಂಜೆ, ನಾಗರಾಜ್ ಹೊಳ್ಮಗೆ, ವೈಷ್ಣವಿ ಎಂ.ವಿ., ಅಕ್ಷಯ ಪೂಜಾರಿ ಕೋಣಿ ಹಾಗೂ ವಿಶೇಷ ಚೇತನ ರಾಜು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.

ಹುಬ್ಬಳ್ಳಿಯ ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್‌ನ ವಿಜಯ ಪಿ. ಪೂಜಾರಿ, ಡೈನಮಿಕ್ ಇನೋಟೆಕ್‌ನ ಽರಜ್ ಹೆಜಮಾಡಿ, ಉದ್ಯಮಿಗಳಾದ ದುಬನ ಮಂಜುನಾಥ ಪೂಜಾರಿ, ನರಸಿಂಹ ಪೂಜಾರಿ, ರಾಘವೇಂದ್ರ ಬಿ. ಪೂಜಾರಿ ಬೆಂಗಳೂರು, ಹರೀಶ್ ಪೂಜಾರಿ ಶಿವಮೊಗ್ಗ, ಸಂಘದ ಉಪಾಧ್ಯಕ್ಷ ಶಿವರಾಮ ಪೂಜಾರಿ ಬಸ್ರೂರು, ಮಹಿಳಾ ಘಟಕಾಧ್ಯಕ್ಷೆ ಗಿರಿಜಾ ಮಾಣಿಗೋಪಾಲ್, ಕೋಶಾಽಕಾರಿ ವಿನಯ್ ಪೂಜಾರಿ ಬನ್ನಾಡಿ, ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್‍ಯದರ್ಶಿ ಯೋಗೇಶ್ ಪೂಜಾರಿ ಕೋಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ಕಾರ್‍ಯಕ್ರಮ ನಿರೂಪಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!