BlogCulturalEconomyEntertainmentFashionHighlightsHuman storiesLifestyleLocal newsOthersSportsState newsSuccess storiesTop StoriesTrending

ಕೋಝಿಕ್ಕೋಡ್‌: ರಾಷ್ಟ್ರೀಯ ಪವರ್ ಲಿಫ್ಟಿಂಗ್ ನಲ್ಲಿ ಕುಂದಾಪುರ ನ್ಯೂ ಹರ್ಕ್ಯೂಲಸ್ ನ ಡಾ. ಸತೀಶ್ ಖಾರ್ವಿಗೆ ಚಿನ್ನದ ಪದಕ

Aware others:

ಕುಂದಾಪುರ: ಕೇರಳದ  ಕೋಝಿಕ್ಕೋಡ್‌  ವಿ.ಕೆ. ಕೃಷ್ಣ ಮೆನನ್  ಒಳಾಂಗಣ ಕ್ರೀಡಾಂಗಣದಲ್ಲಿ ಆಗಸ್ಟ್ 2ರಿಂದ 7ರವರೆಗೆ ರಾಷ್ಟ್ರಮಟ್ಟದ ಮಾಸ್ಟರ್ಸ್ ಪುರುಷರು ಮತ್ತು ಮಹಿಳೆಯರು ಕ್ಲಾಸಿಕ್ ಪವರ್‌ಲಿಸ್ಟಿಂಗ್ -2025ರ ಸ್ಪರ್ಧೆಯಲ್ಲಿ ಕುಂದಾಪುರದ 66 ಕೆಜಿ ವಿಭಾಗದ ಮಾಸ್ಟರ್ 1 ವಿಭಾಗದಲ್ಲಿ ಒಟ್ಟು 480 ಕೆಜಿ ಭಾರವನ್ನು ಎತ್ತಿ ಸತೀಶ್ ಖಾರ್ವಿ 1 ಚಿನ್ನ 2 ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ರಾಷ್ಟ್ರಮಟ್ಟದ ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ 222.5 ಬಾರವನ್ನು ಎತ್ತಿ 5ನೇ ರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಅಲ್ಲದೆ ತನ್ನ ದಾಖಲೆಯನ್ನು ತಾನೇ 4 ಬಾರಿ ಮುರಿದ ಹೆಗ್ಗಳಿಕೆಗೆ ಡಾ. ಸತೀಶ್ ಖಾರ್ವಿ ಪಾತ್ರರಾಗಿದ್ದಾರೆ.

ಕುಂದಾಪುರದ ನ್ಯೂ ಹರ್ಕ್ಯುಲೇಸ್ ಜಿಮ್‌ ಮುಖ್ಯಸ್ಥರಾಗಿರುವ ಸತೀಶ್ ಖಾರ್ವಿ, ಕುಂದಾಪುರ ಘಟಕದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾಗಿದ್ದಾರೆ. 2019ರಲ್ಲಿ 210 ಕೆಜಿ, 2021ರಲ್ಲಿ 217.5 ಕೆ.ಜಿ, 2022ರಲ್ಲಿ 220 ಕೆ.ಜಿ, 2023ರಲ್ಲಿ 221 ಕೆಜಿ ಹಾಗೂ ಇದೀಗ ಕೇರಳದಲ್ಲಿ ನಡೆದ ವೇಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ 2025ರಲ್ಲಿ 222.5 ಕೆ.ಜಿ ಭಾರ ಎತ್ತಿ ದಾಖಲೆ ನಿರ್ಮಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!