BlogEconomyEducationGovernmentHighlightsHuman storiesLifestyleLocal newsOthersPoliticsState newsSuccess storiesTop StoriesTrending

ದಿವಂಗತ ಮಧುಕರ್ ಶೆಟ್ಟಿ ಪುತ್ಥಳಿ ನಿರ್ಮಾಣ ಹಾಗೂ ಕೋಟ ಪೊಲೀಸ್ ಠಾಣೆಗೆ ಹೊಸ ಜೀಪ್ ಒದಗಿಸಲು ಗೃಹ ಸಚಿವರಿಗೆ ಅಜಿತ್ ಶೆಟ್ಟಿ ಮನವಿ

Aware others:

ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡದ ಹೆಮ್ಮೆ, ಭ್ರಷ್ಟಾಚಾರದ ಕಡು ವಿರೋಧಿ, ಐಪಿಎಸ್ ಆಧಿಕಾರಿಗಳಿಗೆಲ್ಲ ಮಾದರಿಯಾಗಿದ್ದ ಮಾಸ್ ಮಾಸ್ಟರ್, ಐಪಿಎಸ್ ಅಧಿಕಾರಿ ದಿವಂಗತ ವಡ್ಡರ್ಸೆ ಮಧುಕರ್ ಶೆಟ್ಟಿ ಅವರ ಪುತ್ಥಳಿಯನ್ನು ಅವರ ಹುಟ್ಟೂರು ವಡ್ಡರ್ಸೆಯಲ್ಲಿ ನಿರ್ಮಿಸಬೇಕು ಹಾಗೂ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆಗೆ ಹೊಸ ಪೊಲೀಸ್ ವಾಹನ ಒದಗಿಸಬೇಕು ಎಂಬುದಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರದಾನ‌ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಗೃಹ ಸಚಿವರನ್ನು ಬನೆಟಿ ಮಾಡಿದ ವಡ್ಡರ್ಸೆ ಅಜಿತ್ ಶೆಟ್ಟಿ, ಕರಾವಳಿಯ ಅಭಿವೃದ್ದಿ, ಕಾನೂನು ಸುವ್ಯವಸ್ಥೆಗಳ ಬಗ್ಗೆ ಚರ್ಚಿಸಿದ್ದಾರೆ. ಪೊಲೀಸ್‌ ಮೂಲಭೂತ ಸವಲತ್ತುಗಳ ಬಗ್ಗೆಯೂ ಚರ್ಚಿಸಿದರು. 

ಈ ಸಂದರ್ಭ ಯುವ ಚಲನಚಿತ್ರ ನಟ ಹಾಗೂ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ರಾಮಚೇತನ್ ಜೊತೆಗಿದ್ದರು. ಮನವಿ ಸ್ವೀಕರಿಸಿದ ಗೃಹ ಸಚಿವ ಈ ಬಗ್ಗೆ ಅಧಿಕಾರಿಗಳು ಹಾಗೂ ಮುಖ್ಯಮಂತ್ತಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅಜಿತ್ ಕುಮಾರ್ ಶೆಟ್ಟಿ ತಿಳಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!