AccidentBlogCrime newsEconomyGovernmentHighlightsHuman storiesLifestyleLocal newsNatureOthersTop StoriesTrending

ಮರವಂತೆ: ಭಾರೀ ಗಾಳಿ ಮಳೆಗೆ ವರಾಹಸ್ವಾಮಿ ದೇವಸ್ಥಾನದ ಛಾವಣಿ ಹಾರಿ ನಷ್ಟ

Aware others:

ಕುಂದಾಪುರ: ಕಳೆದ ಮೂರು ದಿನಗಳಿಂದ ಬೀಸುತ್ತಿದ್ದ ಭಾರೀ ಗಾಳಿ ಹಾಗೂ ಮಳೆಗೆ ಭಾನುವಾರ ಮುಂಜಾನೆ ಮರವಂತೆಯ ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದ ಒಳ ಛಾವಣಿಯ ತಗಡು ಶೀಟುಗಳು ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದೆ. 

ಸುಮಾರು ನೂರೈವತ್ತಕ್ಕೂ ಹೆಚ್ಚು ತಗಡಿನ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಎರಡು ದಿನಗಳ ಹಿಂದಷ್ಟೇ ಇಲ್ಲಿ ಕರಗಕಾಟಕ ಅಮವಾಸ್ಯೆಯ ಪ್ರಯುಕ್ತ ವಿಶೇಷ ಜಾತ್ರೋತ್ಸವ ನಡೆದಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರೂ ಆಗಮಿಸಿದ್ದರು.

ಆದರೆ ದೇವರ ದಯೆಯೋ, ಜಾತ್ರೋತ್ಸವ ಮುಗಿದು ಎರಡು ದಿನದ ಬಳಿಕ ಈ ಅನಾಹುತ‌ ನಡೆದಿದೆ. ನಸುಕಿನ ವೇಳೆ ಶೀಟುಗಳು ಧರಾಶಾಹಿಯಾಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.‌ಭಾನುವಾರ ಹೊಸ ಶೀಟುಗಳನ್ನು ಹೊದೆಸುವ ಪ್ರಕ್ರಿಯೆ ನಡೆದಿದೆ.


Aware others:

Leave a Reply

Your email address will not be published. Required fields are marked *

error: Content is protected !!