ಕೋಟ|ಸಾಲಿಗ್ರಾಮ: ಮೀನುಗಾರರ ಸಮಸ್ಯೆಗಳಿಗೆ ಸರ್ಕಾರ ಇನ್ನು ಹೆಚ್ಚು ಸ್ಪಂದಿಸಬೇಕು – ರೋಟರಿ ಕ್ಲಬ್ ಸನ್ಮಾನ ಸ್ವೀಕರಿಸಿ ಅಶೋಕ್ ಪೂಜಾರಿ ಬೀಜಾಡಿ

ಕುಂದಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀನುಗಾರರ ಸಮಸ್ಯೆಗಳಿಗೆ ಇನ್ನೂ ಹೆಚ್ಚು ಸ್ಪಂದಿಸಬೇಕು. ಮೀನುಗಾರರು ತಮ್ಮ ಕುಟುಂಬ ನಿರ್ವಹಣೆಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಾರೆ. ಮೀನುಗಾರಿಕೆ ವೇಳೆ ಅವಘಡಗಳು ನಡೆದರೆ ಸರ್ಕಾರ ಇನ್ನೂ ಹೆಚ್ಚಿನ ಪರಿಹಾರವನ್ನು ನೀಡುವಲ್ಲಿ ಕ್ರಮ ಕೈಗೊಳ್ಳಬೇಕು. ಮೀನುಗಾರಿಕಾ ಮನೆಗಳ ಅನುದಾನವನ್ನು ಕನಿಷ್ಟ ಮೂರು ಪಟ್ಟು ಹೆಚ್ಚಿಸುವ ಮೂಲಕ ಮೀನುಗಾರ ಕುಟುಂಬಗಳಿಗೆ ಭದ್ರತೆ ಒದಗಿಸಬೇಕು. ಮೀನುಗಾರಿಕಾ ವೃತ್ತಿಯ ಸಂದರ್ಭ ಅವರಿಗೆ ಮೂಲ ಸೌಕರ್ಯಗಳನ್ನು ಹಾಗೂ ವಿಶೇಷ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಬೇಕು ಎಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಬೀಜಾಡಿ ಅಶೋಕ್ ಪೂಜಾರಿ ಹೇಳಿದರು.
ಅವರು ಬುಧವಾರ ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ನ ಅಧ್ಯಕ್ಷ ಯೋಗೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶರಣಯ್ಯ ಹಿರೇಮಠ, ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ಮತ್ತು ರಾಜೇಂದ್ರ ಸುವರ್ಣ, ಚಂದ್ರ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಮಾಧವ್ ಪೂಜಾರಿ, ಬಸವರಾಜ್ ಪೂಜಾರಿ ಹುದ್ರೋಳಿ, ವಿನಯ ಪೂಜಾರಿ ಬನ್ನಾಡಿ ಮೊದಲಾದವರು ಉಪಸ್ಥಿತರಿದ್ದರು
ವಿಡಿಯೋ ನೋಡಲು ಇಲ್ಲಿ 🖕 ಕ್ಲಿಕ್ಕಿಸಿ
