AccidentBlogCrime newsEconomyGovernmentHighlightsHuman storiesLifestyleLocal newsOthersTop StoriesTrending

ನಿಂತಿದ್ದ ವಾಹನ ತಪ್ಪಿಸಲು ಹೋದ ಸ್ಕೂಟರ್ ಡಿಕ್ಕಿ – ಸವಾರ ಗಂಭೀರ, ಸ್ಕೂಟರ್ ನುಜ್ಜುಗುಜ್ಜು

Aware others:

ಕುಂದಾಪುರ: ಶನಿವಾರ ರಾತ್ರಿ ಸುರಿಯುತ್ತಿದ್ದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ ನಡೆದಿದ್ದು, ಸ್ಕೂಟರ್ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿವಿಎಸ್ ಶೋರೂಂ ಸಮೀಪ ಶನಿವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಸ್ಕೂಟರ್ ಸಂಪುರ್ಣ ನುಜ್ಜುಗುಜ್ಜಾಗಿದೆ.

ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಮಧ್ಯ ಪ್ರದೇಶದ ಭಾರತ ಬೆಂಝ್ ಬಸ್ ಹೆದ್ದಾರಿಯಲ್ಲಿ ಹಾಳಾಗಿ ನಿಂತಿತ್ತು. ಇದೇ ಸಂದರ್ಭ ಅದೇ ದಿಕ್ಕಿನಲ್ಲಿ ಸ್ಕೂಟರ್ ಸವಾರ ಪ್ರಯಾಣಿಸುತ್ತಿದ್ದ. ಆದರೆ  ಮಳೆಯಿಂದಾಗಿ ಕೆಟ್ಟು ನಿಂತ ಬಸ್ ಸಮೀಪ ಬಂದಾಗ ಸ್ಕೂಟರ್ ಸವಾರನಿಗೆ ಗೊತ್ತಾಗಿದೆ ಎನ್ನಲಾಗಿದೆ. ತಕ್ಷಣ ತಪ್ಪಿಸಲು ಸ್ಕೂಟರನ್ನು ಬಲಕ್ಕೆ ತಿರುಗಿಸಿದ್ದಾನೆ. ಆಗ ಮತ್ತೊಂದು ಲಾರಿ  ಬಲಬದಿಯಲ್ಲಿ ಸಂಚರಿಸುತ್ತಿದ್ದು, ಸ್ಕೂಟರ್ ಸವಾರನ ಸಮೇತ ಲಾರಿಯಡಿಗೆ ಸಿಕ್ಕಿದೆ.. ಘಟನೆಯಲ್ಲಿ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗೊಂಡಿದ್ದು, ಸ್ಕೂಟರ್ ನುಜ್ಜುಗುಜ್ಜಾಗಿದೆ. ಸಂಚಾರೀ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!