ಚಿಕ್ಕಮಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಮಂಜುನಾಥ್ ಭಂಡಾರಿಯವರನ್ನು ಸ್ವಾಗತಿಸಿದ ಅಜಿತ್ ಶೆಟ್ಟಿ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಮಂಜುನಾಥ್ ಭಂಡಾರಿಯವರನ್ನು ಜಿಲ್ಲೆಯ ಉಸ್ತುವಾರಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭ ಮಾತನಾಡಿದ ಅಜಿತ್ ಕುಮಾರ್ ಶೆಟ್ಟಿ, ಮಂಜುನಾಥ್ ಭಂಡಾರಿ ಅವರ ಮಾರ್ಗದರ್ಶನ, ಪ್ರೇರಣಾದಾಯಕ ಮಾತುಗಳು ನಮ್ಮ ಸಂಘಟನೆಯ ಭವಿಷ್ಯಕ್ಕೆ ಬೆಳಕು ಹಚ್ಚಿವೆ. ಶಾಸಕ ಭಂಡಾರಿಯವರ
ಪಕ್ಷ ನಿಷ್ಠೆ, ಶಿಸ್ತು ಹಾಗೂ ಯುವಶಕ್ತಿಯ ಮಹತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಂಘಟನೆಯ ಬಲವರ್ಧನೆಗೆ ಅವರ ಬೆಂಬಲ ನೀಡುವಂತೆ ಇದೇ ಸಂದರ್ಭ ಕೋರಿದರು.
