ರೈಲ್ವೇ ಟ್ರ್ಯಾಕ್ ಮನ್ ಸಾವಿಗೆ ಇಲಾಖೆಯೇ ಹೊಣೆ- ಮೃತನ ಪತ್ನಿಯಿಂದ ಪೊಲೀಸ್ ದೂರು

ಕುಂದಾಪುರ: ಮಾರ್ಚ್ 31ರಂದು ಕೊಂಕಣ್ ರೈಲ್ವೆ ಇಲಾಖೆಯಲ್ಲಿ ಟ್ರ್ಯಾಕ್‌ಮ್ಯಾನ್ ಆಗಿ ಕರ್ತವ್ಯ ಮಾಡುತ್ತಿದ್ದ ಆನಂದ (43) ಎಂಬುವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿ, ಎಸ್.ಎಸ್.ಇ. ವೀರೇಶ್ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶ ಮತ್ತು ಕಾಂಟ್ರಾಕ್ಟರ್ ರೋನಾಲ್ಡ್ ಸಿಕ್ವೇರಾ ಮತ್ತು ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿಗಲೇ ಹೊಣೆ ಎಂಬುದಾಗಿ ಮೃತ ಆನಂದ ಅವರ ಪತ್ನಿ ಉಪ್ಪುಂದ ಗ್ರಾಮದ ನಾಗಶ್ರೀ (41) ವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಟ್ರ್ಯಾಕ್ ಮೆನ್ ಆನಂದ ಅವರು ಜೂನ್ 31ರಂದು ಕರ್ತವ್ಯಕ್ಕೆ ಹೋಗಿದ್ದವರು ಕೊಂಕಣ ರೈಲ್ವೆ ಇಲಾಖೆಯ ಎಸ್ ಎಸ್ ಇ ವೀರೇಶರವರ ಆದೇಶದಂತೆ, ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ಎಂಬಲ್ಲಿಗೆ, ಟ್ರ್ಯಾಕ್ ಮ್ಯಾನ್ ಕರ್ತವ್ಯ ಮಾಡಿಕೊಂಡಿದ್ದವರನ್ನು ಹೈಟ್ ಗೇಜ್ ಕರ್ತವ್ಯಕ್ಕೆ ನೇಮಿಸಿದಂತೆ ವೀರೇಶ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶ ಮಹೇಶ್ ಎಂಬವರೊಂದಿಗೆ ಹೋಗಿದ್ದು, ಹೈಟ್ ಗೇಜ್ ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ಕಂಬದ ಮೇಲೆ ಅಡ್ಡವಾಗಿ ಹಾಕುತ್ತಿದ್ದ ಕಬ್ಬಿಣದ ಪಟ್ಟಿ ಸರಿಯಾಗಿ ಕುಳಿತುಕೊಳ್ಳದಿದ್ದಾಗ ರೈಲ್ವೇ ಇಲಾಖೆಯ ಅಧಿಕಾರಿ ಎಸ್ ಎಸ್ ಈ ವೀರೇಶ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶರವರು ಆನಂದರವರಿಗೆ ಬಲವಂತವಾಗಿ ಹೆದರಿಸಿ 30 ಕೆ.ಜಿ. ತೂಕದ ಜಾಕನ್ನು ಕೈಗೆ ಕೊಟ್ಟು ಲ್ಯಾಡರ್ ಮೇಲೆ ಹತ್ತಿ ನೋಡುವಂತೆ ಮೇಲಕ್ಕೆ ಹತ್ತಲು ಬೇಕಾದ ಯಾವುದೇ ಸುರಕ್ಷಾ ಸಾಧನಗಳನ್ನು ನೀಡದೆ, ನಿರ್ಲಕ್ಷವಾಗಿ ಹೈಟ್ ಗೇಜ್ ಹತ್ತುವಂತೆ ತಿಳಿಸಿದ್ದು, ಅವರ ಆದೇಶಿಸಿದಂತೆ ಆನಂದ್ ಮೇಲಕ್ಕೆ ಹತ್ತಿ ಹೈಟ್‌ಗೇಜನ್ನು ಪರಿಶೀಲಿಸುತ್ತಿರುವಾಗ, ಹೈಟ್‌ಗೇಜ್ ಕಾಮಗಾರಿಗೆ ಬಳಸುವ ಉಪಕರಣ ಅವರ ತಲೆಗೆ ಹೊಡೆದ ಪರಿಣಾಮ ಮಧ್ಯಾಹ್ನದ ವೇಳೆಗೆ ಮೇಲಿನಿಂದ ಕೆಳಗೆ ಬಿದ್ದು ತಲೆಗೆ ತೀವೃತರವಾದ ಪೆಟ್ಟಾಗಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂಬುದಾಗಿ ನಾಗಶ್ರೀ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
