BlogCrime newsEducationGovernmentHighlightsHuman storiesLifestyleLocal newsOthersTechTop StoriesTrendingWomen Care

ಆನ್ ಲೈನ್ ವಂಚನೆ – 4 ಪ್ರಕರಣಗಳಲ್ಲಿ ಲಕ್ಷಾಂತರ ವಂಚನೆ

Aware others:

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ನಾಲ್ಕು ಪ್ರತ್ಯೇಕ ಆನ್ ಲೈನ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು ನಾಲ್ಕು ಲಕ್ಷದ ತೊಂಭತ್ತೆರಡು ಸಾವಿರ ರೂಪಾಯಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

ಒಂದನೇ ಪ್ರಕರಣ ಉಡುಪಿಯಲ್ಲಿ ನಡೆದಿದ್ದು, ದೀಕ್ಷಾ ಎಂಬುವರು ವರ್ಕ್ ಪ್ರಂ ಹೋಮ್ ನಲ್ಲಿ ಕೆಲಸ ಮಾಡುವಂತೆ ಬಂದ ವಾಟ್ಸಾಪ್ ಸಂದೇಶ ನಂಬಿ ಒಟ್ಟು 1,90,000 ರೂಪಾಯಿ ಕಳೆದುಕೊಂಡಿದ್ದಾರೆ.

ಎರಡನೇ ಪ್ರಕರಣದಲ್ಲಿ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ನರೇಂದ್ರ ಎಂಬುವರಿಗೆ JK-FINUVU ನಿಂದ OTP ಮತ್ತು Link ಮೆಸೇಜ್ ಬಂದಿದ್ದು, ಲಿಂಕ್ ಒತ್ತಿದ ಬಳಿಕ  30 ಸಾವಿರ ರೂಪಾಯಿ ಹಾಗೂ ಮತ್ತೆ AX-AIRINF ನಿಂದ ಬಂದಿದ್ದ OTP ತೆರೆದ ಪರಿಣಾಮ 20 ಸಾವಿರ ಹಾಗೂ Fino Payment Bank ಗೆ 5000 ರೂಪಾಯಿ ಸೇರಿ 55002 ರೂಪಾಯಿ ಕಳೆದುಕೊಂಡಿದ್ದಾರೆ.

ಮೂರನೇ ಪ್ರಕರಣದಲ್ಲಿ ಶಂಕರನಾರಾಯಣ ಠಾಣಾ ವ್ಯಾಪ್ತಿಯ ನಿತಿನ್ ಅವರ Flipkart ಖಾತೆಗೆ ಯಾರೋ ಲಾಗಿನ್ ಆಗಿ ಅವರ ಅರಿವಿಗೆ ಇಲ್ಲದಂತೆ Flipkart ಖಾತೆಯಿಂದ Credid card ಅನ್ನು ಬಳಸಿ 25,126/- ರೂ ಮೌಲ್ಯದ Nothing ಕಂಪೆನಿಯ ಮೊಬೈಲ್ ಅನ್ನು ಆನ್ ಲೈನ್ ಮುಖಾಂತರ ಖರೀದಿ ಮಾಡಿ ವಂಚಿಸಿದ್ದಾರೆ.

ನಾಲ್ಕನೇ ಪ್ರಕರಣದಲ್ಲಿ ಕುಂದಾಪುರ ಠಾಣಾ ವ್ಯಾಪ್ತಿಯ ಪ್ರತಿಮ ಇವರು ಇಸ್ಟಾಗ್ರಾಮ್‌ ಖಾತೆ ಬಳಕೆ ಮಾಡುವ ಸಂಧರ್ಭದಲ್ಲಿ Parttime ಕೆಲಸ Captha Typing ಲಿಂಕ್‌ ಮೂಲಕ ಒಟ್ಟು 2,21,900 ರೂಪಾಯಿಗಳನ್ನು ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಒಟ್ಟು ನಾಲ್ಕು ಪ್ರಕರಣಗಳಲ್ಲಿ ಐದು ಲಕ್ಷ ರೂಪಾಯಿ ವಂಚನೆ ನಡೆದಿದೆ.


Aware others:

Leave a Reply

Your email address will not be published. Required fields are marked *

error: Content is protected !!