ನಿಂತಿದ್ದ ಬೈಕಿಗೆ ಮತ್ತೊಂದು ಬೈಕ್ ಡಿಕ್ಕಿ ; ವಾರದ ಬಳಿಕ ಸವಾರ ಸಾವು
ಕುಂದಾಪುರ: ನಿಲ್ಲಿಸಿಕೊಂಡಿದ್ದ ಬೈಕಿಗೆ ಮತ್ತೊಂದು ಬೈಕ್ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ನಿಂತಿದ್ದ ಬೈಕಿನ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಾರದ ಬಳಿಕ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಬೈಕ್ ಸವಾರನನ್ನು ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಶೀನ(75) ಎಂದು ಗುರುತಿಸಲಾಗಿದೆ.

ಶೀನ ಅವರು ಜೂನ್ 13ರಂದು ಬೆಳಿಗ್ಗೆ ತನ್ನ ಬೈಕಿನಲ್ಲಿ ಬಂದು ನಾಯಕವಾಡಿಯಿಂದ ಆಲೂರು ಹೋಗಲು ಮುಳ್ಳಿಕಟ್ಟೆ ಜಂಕ್ಷನ್ ಬಳಿಯ ನಾಯಕವಾಡಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿ ರಸ್ತೆ ದಾಟಲೆಂದು ನಿಲ್ಲಿಸಿಕೊಂಡಿರುವಾಗ ಕುಂದಾಪುರ ಕಡೆಯಿಂದ ತ್ರಾಸಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಸವಾರ ಗಣೇಶ ಎಂಬಾತ ರಾಜೇಶ್ ರವರನ್ನು ಸಹಸವಾರಿಯನ್ನಾಗಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ.
ಅಪಘಾತದಲ್ಲಿ ಬೈಕ್ ಸಮೇತರಾಗಿ ನಿಂತಿರುವ ಶೀನ ಅವರು ರಸ್ತೆಗೆ ಬಿದ್ದು ತಲೆ ಭಾಗಕ್ಕೆ ಮತ್ತು ಸೊಂಟದ ಭಾಗಕ್ಕೆ ಪೆಟ್ಟಾಗಿರುತ್ತದೆ. ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ ಗಣೇಶ ಅವರಿಗೂ ಪೆಟ್ಟಾಗಿದ್ದು ಸಹ ಸವಾರನಿಗೆ ಯಾವುದೇ ಪೆಟ್ಟಾಗಿರಲಿಲ್ಲ. ತಕ್ಷಣ ಶೀನ ಅವರು ಚಿಕಿತ್ಸೆಯ ಬಗ್ಗೆ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಖಾಸಗೀ ಆಸ್ಪತ್ರೆಗೆ ದಾಖಲಾಗಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್ ಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
