ಉಡುಪಿ : ಫೋಕ್ಸೋ ಪ್ರಕರಣದ ಆರೋಪಿ ಗೌತಮ್ ಮುಂಬೈನಲ್ಲಿ ಬಂಧನ
ಉಡುಪಿ: ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳದ ಸಂದೇಶ ನೀಡಿ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ಬಗ್ಗೆ ದಾಖಲಾದ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಗೌತಮ್ ಅಣ್ಣಯ್ಯ ರಾವ್ ಎಂಬಾತನನ್ನು ಪೊಲೀಸರು ಮುಂಬೈ ಬಾರ್ ಒಂದರ ಎದುರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಹಂಗಳೂರಿನ ಪಾಂಡುರಂಗ ನಾಯ್ಕ್ ನಾಪತ್ತೆಯಾಗಿದ್ದಾನೆ.

vasthava.com
ಆರೋಪಿ ಗೌತಮ್ ಅಣ್ಣಯ್ಯ ರಾವ್ ಪ್ರಕರಣದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಮುಮಬೈನ ಬಾರೊಂದಕ್ಕೆ ಕುಡಿಯಲು ಬಂದ ಸಮಯದಲ್ಲಿ ಪೊಲೀಸರು ಬಲೆ ಬೀಸಿದ್ದಾರೆ. ಬಳಿಕ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗೆ ಜಾಮೀನು ದೊರಕಿದೆ ಎಂದು ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪಾಂಡುರಂಗ ನಾಯಕ್ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
