ಹಿಂದಿನಿಂದ ಕಾರು ಡಿಕ್ಕಿ – ಇಬ್ಬರು ಮಕ್ಕಳು ಸೇರಿಂತೆ ಸ್ಕೂಟಿಯಲ್ಲಿದ್ದ ಮೂವರು ಗಂಭೀರ
ಕುಂದಾಪುರ: ಮಕ್ಕಳನ್ನು ಆಸ್ಪತ್ರೆಗೆ ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ತಂದೆ ಹಾಗೂ ಇಬ್ಬರು ಪುಟ್ಟ ಮಕ್ಕಳು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಾಳ್ಕುದ್ರು ಗ್ರಾಮದ ಮಾಬುಕಳ ಸೇತುವೆ ಮೇಲೆ ನಡೆದಿದೆ.

ಬ್ರಹ್ಮಾವರ ದ ಆರೂರು ಗ್ರಾಮದ ನಿವಾಸಿ ಚಂದ್ರಕಾಂತ(46) ಹಾಗೂ ಅವರ ಮಕ್ಕಳಾದ ವಿಹಾನ್ (11) ಹಾಗೂ ಲಿಹಾನ್ (6) ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದವರು. ಚಂದ್ರಕಾಂತ್ ಅವರು ಕೆಲಸದಿಂದ ರಜೆ ಮಾಡಿ ಚಿಕಿತ್ಸೆ ಬಗ್ಗೆ ಜುಪಿಟರ್ ಸ್ಕೂಟಿ ನಂಬ್ರ KA-20-EQ-1961 ರಲ್ಲಿ ಮಕ್ಕಳಾದ ವಿಹಾನ್ (11) ಮತ್ತು ಲಿಹಾನ್ (6) ರಾವರನ್ನು ಕುಳ್ಳಿರಿಸಿಕೊಂಡು ಬ್ರಹ್ಮಾವರ – ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬ್ರಹ್ಮಾವರದಿಂದ ಸಾಲಿಗ್ರಾಮ ಕಡೆ ಹೋಗುತ್ತಿದ್ದರು. ಮಾಬುಕಳ ಸೇತುವೆ ಮೇಲೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಂದ್ರಕಾಂತ್ ಅವರ ಎಡಕೈ ಮಾಂಸ ಹೊರಬಂದು ಮೂಳೆ ಮುರಿದಿದೆ. ವಿಹಾನ್ ಗೆ ತೊಡೆ ಕಾಲಿಗೆ, ಕೈಗೆ ಮತ್ತು ಲಿಹಾನ್ ಗೆ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ಅಪಘಾತದ ಸ್ಥಳದಲ್ಲಿ ನೆರೆದಿದ್ದ ಜನ ಹಾಗೂ ಪರಿಚಯಸ್ಥರು ಮೂವರನ್ನೂ ಬ್ರಹ್ಮಾವರದ ಖಾಆಸಗಿ ಆಸ್ಪತ್ರೆಗೆ ಸಾಗಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
