AccidentBlogCrime newsGovernmentHealthHighlightsHuman storiesLifestyleLocal newsObituaryOthersState newsTop StoriesTrendingWomen Care

ಕುಂದಾಪುರ: ಗದ್ದೆ ಬಯಲಿಗೆ ಹರಡಿದ ಬೆಂಕಿ – ನಂದಿಸಲು ಹೋದ ಕೃಷಿಕ ಬೆಂಕಿಗಾಹುತಿ

Aware others:

ಕುಂದಾಪುರ: ಗದ್ದೆಯಲ್ಲಿ ಹಾಕಿದ್ದ ಸುಡುಮಣ್ಣಿನ ಬೆಂಕಿ ಬಯಲಿಗೆ ಹಬ್ಬಿದನ್ನ ಕಂಡ ಕೃಷಿಕ ವೃದ್ಧನರುವ ಬೆಂಕಿ ನಂದಿಸಲು ಹೋಗಿ ಹೊಗೆ ಆವರಿಸಿ ಉಸಿರುಗಟ್ಟಿ ಬಿದ್ದು ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕಾಳವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಾವರ ಎಂಬಲ್ಲಿ ನಡೆದಿದೆ. ಇಲ್ಲಿನ ಶಾಂತಾವರ ನಿವಾಸಿ ಮಹಾಲಿಂಗ ದೇವಾಡಿಗ (80) ಎಂಬುವರೇ ಬೆಂಕಿ ಗಾಹು ತಿಯಾದ ಕೃಷಿಕ. ಎಂದು ಗುರುತಿಸಲಾಗಿದೆ.

ಮೂಲತಃ ಕೃಷಿಕರಾಗಿರುವ ಮಹಾಲಿಂಗ ದೇವಾಡಿಗ ತಮ್ಮ ಮನೆ ಸಮೀಪದ ಗದ್ದೆಯಲ್ಲಿ ಬೇಸಾಯಕ್ಕೆಂದು ಸುಡುಮಣ್ಣು ರಾಶಿ ಹಾಕಿದ್ದರು. ಶನಿವಾರ ಮಧ್ಯಾಹ್ನ ಸುಡು ಮಣ್ಣಿನ ಬೆಂಕಿ ಇದ್ದಕ್ಕಿದ್ದಂತೆ ಗದ್ದೆ ಬಯಲಿಗೆ ಹರಡಿದೆ. ಇದನ್ನು ಗಮನಿಸಿದ ಮಹಾಲಿಂಗ ದೇವಾಡಿಗ ಬೆಂಕಿ ನಂದಿಸಲೆಂದು ಗದ್ದೆಗೆ ಭಾವಿಸಿದ್ದಾರೆ. ಆದರೆ ಸುಡುಬಿಸಲಿನ ಕಾರಣ ಮತ್ತು ಗದ್ದೆಯಲ್ಲಿ ಒಣಗಿದ ಹುಲ್ಲು ಇದ್ದ ಕಾರಣ ಬೆಂಕಿ ತೀವ್ರವಾಗಿ ವ್ಯಾಪಿಸಿ ಮಹಾಲಿಂಗ ದೇವಾಡಿಗರನ್ನು ಸುತ್ತುವರಿದಿದೆ. ಬೆಂಕಿಯ ತೀವ್ರತೆಗೆ ಉಸಿರು ಕಟ್ಟಿದ ಮಹಾಲಿಂಗ ದೇವಾಡಿಗ ಅಲ್ಲೇ ಬಿದ್ದಿದ್ದಾರೆ. ಸುತ್ತಲೂ ಹೊಗೆ ಇದ್ದುದರಿಂದ ಮಹಾಲಿಂಗ ದೇವಾಡಿಗ ಬಿದ್ದಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ವಿಪರೀತ ಬೆಂಕಿ ಮಹಾಲಿಂಗ ದೇವಾಡಿಗರನ್ನು ಸುಟ್ಟು ಹಾಕಿದೆ. ಮಹಾಲಿಂಗ ದೇವಾಡಿಗರ ವೃತ್ತ ದೇಹವನ್ನು ಕುಂದಾಪುರ ಸರ್ಕಾರಿ ಶವಾಗಾರದಲ್ಲಿ ಇಡಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ


Aware others:

Leave a Reply

Your email address will not be published. Required fields are marked *

error: Content is protected !!