AccidentBlogCrime newsHighlightsHuman storiesLifestyleLocal newsOthersTop StoriesTrending

ಅಕಾಲಿಕ ಮಳೆ : ಅರೆಹೊಳೆ ಕ್ರಾಸ್ ನಲ್ಲಿ ಪಲ್ಟಿಯಾದ ತಂಪು ಪಾನೀಯದ ವಾಹನ

Aware others:

ಕುಂದಾಪುರ: ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಅಕಾಲಿಕ ಮಳೆಯಾಗಿದ್ದು ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ವಾಹನಗಳಿಗೆ ಸಮಸ್ಯೆ ಉಂಟಾಗಿದೆ. ಅಕಾಲಿಕ ಮಳೆಯಿಂದಾಗಿ ತಂಪು ಪಾನೀಯ ಸಾಗಿಸುತ್ತಿದ್ದ ವಾಹನ ಸ್ಕಿಡ್ ಆಗಿ ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ ತಂಪು ಪಾನೀಯ ಬಾಟಲಿಗಳು ರಸ್ತೆಗೆ ಚೆಲ್ಲಿ ಒಡೆದುಹೋಗಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅರೆಹೊಳೆ ಕ್ರಾಸ್ ಪೆಟ್ರೋಲ್ ಪಂಪ್ ಬಳಿ ನಡೆದಿದೆ.

ಶನಿವಾರ ಸಂಜೆ ಕುಂದಾಪುರ ದಲ್ಲಿ ಇದ್ದಕ್ಕಿದ್ದಂತೆ ಮಳೆ ಸುರಿದಿದ್ದು ಇದರಿಂದ ರಸ್ತೆಯಲ್ಲಿ ವಾಹನಗಳು ಸ್ಕಿಡ್ ಆಗುತ್ತಿದ್ದುದು ಸ್ವಾಭಾವಿಕವಾಗಿತ್ತು. ರಾತ್ರಿ ತಂಪು ಪಾನೀಯಗಳನ್ನು ತುಂಬಿಸಿಕೊಂಡು ಸಾಗುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರೆಹೊಳೆ ಕ್ರಾಸ್ ಸಮೀಪ ಬ್ರೇಕ್ ಹಾಕಿದಾಗ ಸ್ಕಿಡ್ಡಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ವಾಹನದಲ್ಲಿದ್ದ ತಂಪು ಪಾನೀಯದ ಬಾಟಲಿಗಳು ಹೆದ್ದಾರಿಯಲ್ಲಿ ಬಿದ್ದು ಒಡೆದು ಹೋಗಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದೆ. ಬಳಿಕ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಸಂಚಾರ ಸುವ್ಯವಸ್ಥೆಗೊಳಿಸಲಾಯಿತು. ಘಟನೆಯಿಂದ ಅಪಾರ ಪ್ರಮಾಣದ ಬಾಟಲಿಗಳು ಹಾಗೂ ತಂಪು ಪಾನೀಯ ರಸ್ತೆಗೆ ಚೆಲ್ಲಿ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.

Video ನೋಡಲು ಇಲ್ಲಿ ಕ್ಲಿಕ್ಕಿಸಿ

Aware others:

Leave a Reply

Your email address will not be published. Required fields are marked *

error: Content is protected !!