ಕಾಡುಕೋಣ ಭೇಟೆಯಾಡಿ ಮಾಂಸ ಸಾಗಾಟ- ಮೂವರು ಅಂದರ್

ಶಿರೂರು: ಶಿವಮೊಗ್ಗ ಸಂಪೇಕಟ್ಟೆ- ಹೊಸೂರು ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿದ್ದ ಕಾಣುಕೋಣವನ್ನು ಮಾಂಸ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಮೂರು ಜನರನ್ನು ಸಾಗರದ ಅರಣ್ಯಾಧಿಕಾರಿಗಳು ಬಂಧಿಸಿ ವಾಹನ ಹಾಗೂ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಭಟ್ಕಳ ತಾಲೂಕಿನ ಮುಂಡಳ್ಳಿ ವಾಸಿ ಮಹಮ್ಮದ್ ಅಶ್ರಫ್, ತಾಲೂಕಿನ ಶಿರೂರು ಗ್ರಾಮದ ಹಣಬರಕೇರಿಯ ಅಲಿ ಬಾಪು ಯಾಸೀನ್, ಮದ್ದೋಡಿ ರೋಡ್‌ನ ವಾಸೀಮ್ ಎಂದು ಗುರುತಿಸಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
