ಗೆಂಡೆಸೇವೆ – ಸಿವಿಲ್ ವ್ಯಾಜ್ಯ, ಇತ್ತಂಡಗಳಿಂದ ಮಾರಾಮಾರಿ
ಕುಂದಾಪುರ: ಇವರಿಗೂ ಜಾಗದ ವಿಚಾರದಲ್ಲಿ ಮತ್ತು ಗರಡಿ ಮನೆ ವಿಚಾರದಲ್ಲಿ ತಗಾದೆ ಇದ್ದು, ಮಾನ್ಯ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದ ಪ್ರಕರಣವೊಂದರಲ್ಲಿ ಸಮೀಪದ ಗರಡಿಯಲ್ಲಿ ನಡೆಯುವ ಗೆಂಡ ಸೇವೆ, ಅದಕ್ಕಾಗಿ ಸ್ಥಳ ಸ್ವಚ್ಛತೆ ವಿಚಾರವಾಗಿ ಎರಡೂ ತಂಡಗಳು ಪರಸ್ಪರ ಹೊಡೆದಾಡಿಕೊಂಡು ಮತ್ತೆ ಕ್ರಿಮಿನಲ್ ಕೇಸು ಎಳೆದುಕೊಂಡ ಘಟನೆ ಕುಂದಾಪುರ ಗ್ರಾಮಾಂತರ ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ರೂರು ಎಂಬಲ್ಲಿ ನಡೆದಿದೆ.
ಬಸ್ರೂರಿನ ಮೂಡ್ಕೇರಿ ಗರಡಿ ಮನೆಯಲ್ಲಿ ವಾರ್ಷಿಕ ಗೆಂಡ ಸೇವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗರಡಿಮನೆ ಅಕ್ಕಪಕ್ಕದಲ್ಲಿರುವ ಹುಲ್ಲು ಕಟ್ ಮಾಡುವ ಉದ್ದೇಶದಿಂದ ಮನೆಯ ಪಕ್ಕದ ಗದ್ದೆಯಲ್ಲಿ ಕ್ಲೀನ್ ಮಾಡುತ್ತಿರುವಾಗ ಆರೋಪಿಗಳಾದ .ಕೇಶವ, ಕೃಷ್ಣ, ರಾಜು, ಗಂಗಾಧರ, ಪಾಂಡು, ಗಿರಿಜ,.ಲಕ್ಷ್ಮೀ, ಹಾಗೂ ಉಷಾ ಎಂಬುವರು ಅವಾಚ್ಯವಾಗಿ ಬೈದು ನಿಂದಿಸಿ ಹಲೆಲ ನಡೆಸಿದ್ದಾರೆ ಎಂದು ವಿಠಲ ಎಂಬುವರು ದೂರು ದಾಖಲಿಸಿದ್ದರೆ, ಆರೋಪಿ ವಿಠಲ, ಅಪ್ಪು, ಉದಯ , ವಿನೋದ, ರಾಘವೇಂದ್ರ, ರಘು, ರಾಘು, 8ಸುಮತಿ, ಹಾಗೂ.ಶಂಕರ ಎಂಬುವರು ಹುಲ್ಲು ಕೊಯ್ಯುವ ಮೆಷಿನ್ ಅನ್ನು ತಂದು ಕೇಶವ ಎಂಬುವರ ಗದ್ದೆಗೆ ಅಕ್ರಮ ಪ್ರವೇಶ ಮಾಡಿ ಹುಲ್ಲು ಕಟಾವು ಮಾಡುತ್ತಿದ್ದು ಆಗ ಕೇಶವ ಪ್ರಶ್ನೆ ಮಾಡಿದಕ್ಕೆ ವಿಠಲ ಮತ್ತು ವಿನೋದ ಅವಾಚ್ಯವಾಗಿ ಬೈದು ಹೊಡೆಯಲು ಬಂದಿದ್ದು ವಿಠಲ ಕೈಯಲ್ಲಿದ್ದ ಹುಲ್ಲು ಕಟ್ ಮಾಡುವ ಮೆಷಿನ್ ಅನ್ನು ಪಿರ್ಯಾದಿದಾರರ ಮೇಲೆ ಹಾಯಿಸಿದ್ದು ಆಗ ಪಿರ್ಯಾದಿದಾರರು ತಪ್ಪಿಸಿಕೊಳ್ಳಲು ತನ್ನ ಎಡ ಕೈಯನ್ನು ಅಡ್ಡ ತಡೆದಾಗ ಮೆಷಿನ್‌ನ ಬ್ಲೇಡ್ ಎಡಕೈ ಹಸ್ತಕ್ಕೆ ಮತ್ತು ಬೆರಳಿಗೆ ತಾಗಿ ರಕ್ತಗಾಯ ಆಗಿದೆ ಎಂದು ದೂರು ದಾಖಲಿಸಿದ್ದಾರೆ.
