BlogAccidentCrime newsEconomyHighlightsHuman storiesLifestyleLocal newsOthersTop StoriesTrending

ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಸಾವು

Aware others:

ಕುಂದಾಪುರ: ಅಡಿಕೆ ಮರಕ್ಕೆ ಹತ್ತಿ ಹೋವಿನಗೊನೆ ತೆಗೆಯುತ್ತಿರುವ ಸಂದರ್ಭ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ  ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಹೊಳೆ ಎಂಬಲ್ಲಿ ನಡೆದಿದೆ. ಅಡಿಕೆ ಮರದಿಂದ ಬಿದ್ದು ಸಾವನ್ನಪ್ಪಿದ ದುರ್ದೈವಿಯನ್ನು ಸ್ಥಳಿಯ ನಿವಾಸಿ ರಾಮ ಎಂಬುವರ ತಮ್ಮನ ಮಗ ಸುಬ್ರಹ್ಮಣ್ಯ (35) ಎಂದು ಗುರುತಿಸಲಾಗಿದೆ.

ರಾಮ ಹಾಗೂ ಅವರ ತಮ್ಮನ ಮಗ ಸುಬ್ರಹ್ಮಣ್ಯ ನಾರಾಯಣ ಎಂಬುವರ ಅಡಿಕೆ ತೋಟ ವಹಿಸಿಕೊಂಡಿದ್ದರು. ದಿನಾಲೂ ಅಡಿಕೆ ತೋಟಕ್ಕೆ ಹೋಗಿ ಅಡಿಕೆ ಮತ್ತು ತೆಂಗಿನ ಮರಗಳಿಗೆ ನೀರು ಬಿಟ್ಟು ಅಡಿಕೆ ಹೂವಿನ ಗೋನೆ, ತೆಂಗಿನಕಾಯಿಗಳನ್ನು ಕೊಯ್ಯುತ್ತಿದ್ದು, ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುಬ್ರಹ್ಮಣ್ಯ ರವರು ಅಡಿಕೆ ಹಾಗೂ ಹೂವಿನ ಗೊನೆ ತಗೆಯಲು ಅಡಿಕೆ ಮರ ಹತ್ತಿ ಅಡಿಕೆ ಹಾಗೂ ಹೂವಿನ ಗೊನೆ ತೆಗೆಯುವ ಸಮಯ ಆಕಸ್ಮಿಕವಾಗಿ ಕೈತಪ್ಪಿ ಮರದಿಂದ ನೆಲಕ್ಕೆ ಬಿದ್ದಿದ್ದು, ಜೊತೆಗಿದ್ದವರು ಉಪಚರಿಸಿದಾಗ ಮಾತನಾಡಿರಲಿಲ್ಲ.

ಬಳಿಕ ಅಂಬ್ಯುಲೆನ್ಸ್ ನಲ್ಲಿ ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈಧ್ಯಾಧಿಕಾರಿಗಳು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!