ಯುವಕ ನಾಪತ್ತೆ – ತಾಯಿಯಿಂದ ದೂರು
ಕುಂದಾಪುರ: ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ ಯುವಕನೊಬ್ಬ ನಾಪತ್ತೆಯಾದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಯಡಮೊಗ್ಗೆ ಎಂಬಲ್ಲಿಂದ ವರದಿಯಾಗಿದೆ.
ಯಡಮೊಗ್ಗೆ ಗ್ರಾಮದ ನಿವಾಸಿ ಜಯಲಕ್ಷ್ಮೀ (40) ಎಂಬುವರ ಮಗ ಪ್ರಶಾಂತ (23) ಎಂಬ ಯುವಕ 2024 ರ ಜನವರಿಯಲ್ಲಿ ಮನೆಗೆ ಬಂದವನು 2 ತಿಂಗಳುಗಳ ಕಾಲ ಮನೆಯಲ್ಲಿದ್ದು ಮಾರ್ಚ 1, 2024ರಂದು ಪುನಃ ಕೆಲಸಕ್ಕೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವನು ಮನೆಗೆ ಕಾಲ್ ಮಾಡದೇ, ಬೆಂಗಳೂರಿನಲ್ಲಿ ಎಲ್ಲಿ ಇರುತ್ತೇನೆ ಎಂಬುದಾಗಿ ತಿಳಿಸಿದದೇ ಈ ವರೆಗೂ ಮನೆಗೂ ಬಂದಿಲ್ಲ ಎಂಬುದಾಗಿ ತಾಯಿ ಜಯಲಕ್ಷ್ಮೀ ಶಂಕರನಾರಾಯಣ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಾಗಿದೆ.
