AccidentBlogCrime newsHighlightsLocal newsOthersTop StoriesTrending

ಕೋಟ:  ಬೈಕ್ ಡಿಕ್ಕಿ – ಸವಾರ, ಪಾದಾಚಾರಿ ಗಂಭೀರ

Aware others:

ಕುಂದಾಪುರ: ತರಕಾರಿ ತರಲೆಂದು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ವ್ಯಕ್ತಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮ ರವೀಂದ್ರ (62) ಗಂಭೀರ ಗಾಯಗೊಂಡವರು.

ರವೀಂದ್ರ ತರಕಾರಿ ತರಲು ಹೋಗುವರೇ ಪಾಂಡೇಶ್ವರ ಗ್ರಾಮದ ಸಾಸ್ತಾನ ಎಂಬಲ್ಲಿ ರಾ. ಹೆ. 66 ನ್ನು ದಾಟಿ ರಸ್ತೆಯ ಪಶ್ಚಿಮ ಅಂಚಿನಲ್ಲಿರುವಾಗ ಬ್ರಹ್ಮಾವರ ಕಡೆಯಿಂದ ಸಚಿನ್ ಎಂಬಾತ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದಿಂದ ರವೀಂದ್ರ ರಸ್ತೆ ಮೇಲೆ ಬಿದ್ದಿದ್ದು ಅವರ ಎಡಕಾಲು ಮೂಳೆ ಮುರಿತದ ಗಾಯಗಳಾಗಿವೆ. ಸವಾರನು ಕೂಡಾ ಹತೋಟಿ ತಪ್ಪಿ ಸುಮಾರು ದೂರ ಹೋಗಿ ಬಿದ್ದಿದ್ದು ಅವರಿಗೂ ಅಪಘಾತದಿಂದ ಪೆಟ್ಟಾಗಿದೆ. ಇಬ್ಬರನ್ನೂ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!