BlogCulturalEntertainmentFashionHighlightsLifestyleLocal newsOthersReligionTop StoriesTrending

ಗಂಗೊಳ್ಳಿ : ವೆಂಕಟರಮಣ ದೇವರ ವಿಶ್ವರೂಪ ದರ್ಶನ

Aware others:

ಕುಂದಾಪುರ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ ಸೇವೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಸುಪ್ರಭಾತ, ಭಜನೆ, ದೀಪಾಲಂಕಾರ, ಶ್ರೀದೇವರ ವಿಶ್ವರೂಪ ದರ್ಶನ, ಜಾಗರ ಪೂಜೆ, ಪ್ರಸಾದ ವಿತರಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ವಿಶೇ? ಪೂಜೆ ಪುನಸ್ಕಾರಗಳು ಜರಗಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್. ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿದವು.

ದೇವಳದ ತಾಂತ್ರಿಕ ಜಿ.ವಸಂತ ಭಟ್, ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಜಿ.ವೇದವ್ಯಾಸ ಕೆ.ಆಚಾರ್ಯ, ಜಿ.ವೆಂಕಟೇಶ ನಾಯಕ್, ಜಿ.ಗೋವಿಂದ್ರಾಯ ಆಚಾರ್ಯ, ಜಿ.ವಿಶ್ವನಾಥ ಆಚಾರ್ಯ, ಜಿ.ಶಂಕರ ಕೆ.ಆಚಾರ್ಯ, ದೇವಸ್ಥಾನದ ಮಂಡಳಿ ಸದಸ್ಯರು, ಸೇನಾಪುರ ಆಚಾರ್ಯ ಮತ್ತು ಗಂಗೊಳ್ಳಿ ಆಚಾರ್ಯ ಕುಟುಂಬಸ್ಥರು, ಸೇವಾದಾರರು, ಊರಿನ ಹತ್ತು ಸಮಸ್ತರು, ಭಜಕರು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!