BlogEconomyGovernmentHighlightsLifestyleLocal newsOthersPoliticsState newsTop StoriesTrending

*ಕುಂದಾಪುರ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿನೋದ್ ಕ್ರಾಸ್ಟೊ ಆಯ್ಕೆ*

Aware others:

ಕುಂದಾಪುರ: ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕ್ರಾಸ್ಟೋ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಯ ಮಾಲಕ ವಿನೋದ್ ಕ್ರಾಸ್ಟೊ ಅವರನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಯ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಯೋಜನಾ ಸೇವಾ ವಿಭಾಗದ ಸರ್ಕಾರದ ಻ಧೀನ ಕಾರ್ಯದರ್ಶಿ ಲತಾ ಕೆ ಅವರು ನೇಮಕ ಮಾಡಿ ಆದೇಶ ನೀಡಿದ್ದಾರೆ.

ಬಿ.ಇ ಪದವೀದರರಾಗಿರುವ ವಿನೋದ್ ಕ್ರಾಸ್ಟೋ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಇವರ ತಂದೆ ಎಡ್ವಿನ್ ಕ್ರಾಸ್ಟೊ 1975ರಲ್ಲಿ ಪೌರಸಮಿತಿ ರಚಿಸಿ ಪುರಸಭೆಯ ಒಂದು ಅವಧಿಗೆ ಅಧ್ಯಕ್ಷರಾಗಿದ್ದರು. ತಾಯಿ ಶ್ರೀಮತಿ ಲೇನಿ ಕ್ರಾಸ್ಟೊ ಕೂಡ ಪುರಸಭಾ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.

ಕಥೋಲಿಕ್ ಸಭಾ ವಲಯ ಸಮಿತಿಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಿನೋದ್, ಪ್ರಸ್ತುತ ಶೇವೋಟ್ ಪ್ರತಿಷ್ಠಾನ್ ಟ್ರಸ್ಟಿನ ಅಧ್ಯಕ್ಷರಾಗಿ, ರೋಸರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!