ಕುಂದಾಪುರ: ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸುವುದು ನಮ್ಮ ಹೊಣೆ – ಯೋಗೇಶ್ ಶೆಟ್ಟಿ ಜೆಪ್ಪು
ಕುಂದಾಪುರದಲ್ಲಿ ತುಳುನಾಡ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ
ಕುಂದಾಪುರ: ಸಮಾಜದಲ್ಲಿ ಅನ್ಯಾಯಕ್ಕೊಳಗಾದ ಮತ್ತು ನೊಂದವರ ಮುಖದಲ್ಲಿ ಮಂದಹಾಸ ಬೀರುವುದೇ ತುಳುನಾಡ ರಕ್ಷಣಾ ವೇದಿಕೆಯ ಧ್ಯೇಯ. ಈ ನಿಟ್ಟಿನಲ್ಲಿ ಕುಂದಾಪುರದಲ್ಲಿಯೂ ನಮ್ಮ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದು, ಸತೀಶ್ ಖಾರ್ವಿ ನೇತೃತ್ವದ ಸಂಘಟನೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತುಳುನಾಡು ರಕ್ಷಣೆ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ಹೇಳಿದರು. ಅವರು ಇತ್ತೀಚೆಗೆ ಕುಂದಾಪುರದ ಹೊಟೇಲ್ ಪಾರಿಜಾತದಲ್ಲಿ ಹಮ್ಮಿಕೊಳ್ಳಲಾಗಿದ್ದ ತುಳುನಾಡ ರಕ್ಷಣಾ ವೇದಿಕೆಯ ಕುಂದಾಪುರ ಘಟಕದ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸ್ರೂರು ಶ್ರೀ ಮಹಾಲಿಂಗೆಶ್ವರ ದೇವಸ್ಥಾನ ಧರ್ಮದರ್ಶಿ, ಮಾಜೀ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಇದೇ ಸಂದರ್ಭ ತುಳುನಾಡ ರಕ್ಷಣಾ ವೇದಿಕೆಯ ಕುಂದಾಪುರ ಘಟಕದ ಅಧ್ಯಕ್ಷ, ಅಂತರಾಷ್ಟ್ರೀಯ ಪವರ್ ಲಿಫ್ಟಿರ್ ಕ್ರೀಡಾಪಟು ಸತೀಶ್ ಖಾರ್ವಿ ಅವರಿಗೆ ಸಂಘಟನೆಯ ಶಾಲು, ಧ್ವಜ ಹಸ್ತಾತರಿಸಲಾಯಿತು.

ವಕೀಲ ರವಿಕಿರಣ್ ಮುರುಡೇಶ್ವರ, ನೇವಾದಿ ಕುಂದಾಪುರ, ಅಂತರ್ರಾಷ್ಟ್ರೀಯ ಮಾನವ ಹಕ್ಕು ಆಯೋಗ ಡೆನ್ಮಾರ್ಕ್ನ ಶಿವಾನಂದ ತಲ್ಲೂರು, ಅಮೃತ ಕನ್ವೆಷನ್ ಸೆಂಟರ್ ಮಾರಣಕ ಕಟ್ಟೆ ಇದರ ಮಾಲಕ ಪ್ರದೀಪ್ ಚಂದ್ರ ಶೆಟ್ಟಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ ಶೆಟ್ಟಿ, ಜಿಲ್ಲಾಧ್ಯಕ್ಷ ಕೃಷ್ಣಕುಮಾರ್, ಜಿಲ್ಲಾ ಕಾರ್ಮಿಕ ಘಟಕಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಜಿಲ್ಲಾ ಯುವ ಘಟಕ ಅಧ್ಯಕ್ಷ ವೇಣು ಪೂಜಾರಿ ಸಂತೆಕಟ್ಟೆ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯ ಪೂಜಾರಿ, ಬ್ರಹ್ಮಾವರ ಘಟಕಾಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ, ಕಾಪು ತಾಲೂಕು ಅಧ್ಯಕ್ಷ ಹರೀಶ್ ಶೆಟ್ಟಿ, ಕಾಪು ಮಹಿಳಾ ಘಟಕ ಅಧ್ಯಕ್ಷೆ ಅನುಸೂಯ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜ ಕೊಳಲಗಿರಿ ಪ್ರಾಸ್ತಾವಿಸಿದರು. ಹರ್ಷ ವರ್ಧನ್ ಖಾರ್ವಿ ಸ್ವಾಗತಿಸಿದರು. ಪ್ರದೀಪ್ ಅವಂಜೆ ನಿರೂಪಿಸಿದರು.
