ಕುಂದಾಪುರ: ಶ್ರೀ ನಾರಾಯಣಗುರು ಯುವಕ ಮಂಡಲದಿಂದ ಸ್ವಾತಂತ್ರ್ಯೋತ್ಸವ
ಕುಂದಾಪುರ: ಶ್ರೀ ನಾರಾಯಣಗುರು ಯುವಕ ಮಂಡಲದಿಂದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಮಾಜ ಸೇವಕರಾದ ಸುರೇಂದ್ರ ಹೊನ್ನನಕೇರಿ ಇವರು ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಸಂದೇಶ್ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂಧರ್ಭದಲ್ಲಿ ಬಡ ರೋಗಿಗಳು ಮತ್ತು ಮೃತ ಶವಗಳ ಶೀತಲೀಕರಣ ಉಪಕರಣವನ್ನು ಉಚಿತವಾಗಿ ನೀಡುತ್ತಿರುವ ಸಮಾಜ ಸೇವಕ ಸುರೇಂದ್ರ ಹೊನ್ನನಕೇರಿಯವರನ್ನು ಯುವಕ ಮಂಡಲದ ಅಧ್ಯಕ್ಷ ಸಂದೇಶ್ ಬೀಜಾಡಿಯವರು ಸನ್ಮಾನಿಸಿದರು.

ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ, ಶ್ರೀನಾರಾಯಣಗುರು ಏಜ್ಯುಕೇಶನಲ್& ಕಲ್ಚರಲ್ ಟ್ರಸ್ಟ್ (ರಿ) ಕುಂದಾಪುರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಗಿರಿಜಾ ಮಾಣಿ ಗೋಪಾಲ್ ಉಪಸ್ಥಿತರಿದ್ದರು. .ಶ್ರೀ ನಾರಾಯಣಗುರು ಯುವಕ ಮಂಡಲದ ಕಾರ್ಯದರ್ಶಿ ರಮೇಶ್ ಪೂಜಾರಿ ಮದ್ದುಗುಡ್ಡೆ ವಂದಿಸಿದರು.
