ಹೈಕಾಡಿ: ಸ್ಕೂಟಿ ಸವಾರನ ತಲೆ ಮೇಲೆ ಹರಿದ ಲಾರಿ : ತಲೆ ಒಡೆದು ಸವಾರ ಸಾವು
ಕುಂದಾಪುರ: ಚಲಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆಇದ್ದಲ್ಲದೇ ರಸ್ತೆಗೆ ಬಿದ್ದ ಸವಾರನ ತಲೆಯ ಮೇಲೆಯೇ ಲಾರಿ ಹರಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಜೆ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಸುರೇಶ ರವರ ಮನೆಯ ಹತ್ತಿರ ನಡೆದಿದೆ. ನಾಗರಾಜ್ (41) ಸಾವನ್ನಪ್ಪಿದ ಸವಾರ.
ನಾಗರಾಜ್ ತನ್ನ ಸ್ಕೂಟಿಯಲ್ಲಿ ಶುಕ್ರವಾರ ಸಂಜೆ ಕುಂದಾಪುರದ ಕಡೆಗೆ ಪ್ರಯಾಣಿಸುತ್ತಿದ್ದರು. ಇದೇ ಸಂದರ್ಭ ಗೋಳಿಯಂಗಡಿ ಕಡೆಯಿಂದ ಹಾಲಾಡಿ ಕಡೆಗೆ ಪ್ರಯಾಣಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ನಾಗರಾಜ್ ರಸ್ತೆಗೆ ಬಿದ್ದಿದ್ದು, ಅವರ ತಲೆಯ ಮೇಲೆ ಲಾರಿಯ ಹಿಂದಿನ ಎಡಬದಿಯ ಚಕ್ರ ಹತ್ತಿ ಹೋದ ಪರಿಣಾಮ ತಲೆ ಬುರುಡೆ ಒಡೆದು ಹೋಗಿ, ಮೆದುಳು ಹೊರೆಗೆ ಚೆಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
