BlogHighlightsHuman storiesLifestyleLocal newsNatureOthersPoliticsProtestState newsTop StoriesTrending

ಕೋಟ: ಆಗಸ್ಟ್ 7 ರಂದು ಉಪವಾಸ ಸತ್ಯಾಗೃಹ – ಇಂದು ಕರಪತ್ರ ಬಿಡುಗಡೆ

Aware others:

ಕುಂದಾಪುರ: ತೆಕ್ಕಟ್ಟೆ ಯಿಂದ ಕಾರ್ಕಡದ ವರೆಗೆ ಕೃತಕ ನೆರೆಯಿಂದಾಗಿ ರೈತ ಬೆಳೆದ ಕೃಷಿ ಕೊಳೆತು ನಾರುವ ಪರಿಸ್ಥಿತಿ ಬಂದಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕೆ ಈ ಹಿಂದೆ ಹಲವು ಬಾರಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಅವರ ಪ್ರಯತ್ನ ರೈತರಿಗೆ ಫಲದಾಯಕವಾಗದ ಕಾರಣ ಆಗಸ್ಟ್ 7 ರಂದು ಬುಧವಾರ ಬೆಳಿಗ್ಗೆ ಕೋಟ ಶ್ರೀ ಹಿರೇಮಹಾಲಿಂಗೇಶ್ವರ ದೇವಾಲಯ ಜಾತ್ರಾ ಮೈದಾನದಲ್ಲಿ ಸಾವಿರಾರು ರೈತರು ಸೇರಿ ಸಾಂಕೇತಿಕವಾಗಿ ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನಿಸಿದ್ದೇವೆ ಎಂದು ರೈತ ಧ್ವನಿ ಅಧ್ಯಕ್ಷರಾದ ಜಯರಾಮ್ ಶೆಟ್ಟಿ ಮಣೂರು ಹೇಳಿದರು.

ಶನಿವಾರ  ಶ್ರೀ ಹಿರೇಮಹಾಲಿಂಗೇಶ್ವರ ದೇವಾಲಯದಲ್ಲಿ ಕರಪತ್ರ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋಟ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು, ಗಿಳಿಯಾರು, ಚಿತ್ರಪಾಡಿ, ಬನ್ನಾಡಿ, ಕಾರ್ಕಡ ಗ್ರಾಮಗಳ ರೈತರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು, ಸ್ಥಳೀಯಾಡಳಿತವಾಗಲಿ, ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಸಹಕಾರ ಮಾಡಿ ರೈತಕೂಗನ್ನು ಆಲಿಸಿ ಕೃಷಿಯನ್ನು ಮಾಡಲು ಅವಕಾಶ ಮಾಡಿಕೊಟ್ಟಲ್ಲಿ ನಾವು ಸ್ವಾಗತಿಸುತ್ತೇವೆ. ಒಂದು ವೇಳೆ ಇದು ಫಲಿಸದಿದ್ದರೆ ಮುಂದೆ ಉಗ್ರ ಹೋರಾಟವನ್ನು ಮಾಡಲಿದ್ದೇವೆ ಎಂದು

ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಿಂದ ನಾಗರಮಠ ಚೆಕ್ ಡ್ಯಾಮ್ ವರೆಗೆ ಹೊಳೆಯ ನದಿಪಾತ್ರ ಗುರುತಿಸಿ ಅದರ ಹೂಳು ತೆಗೆಯಬೇಕು, ಕೋಟ – ಸೈಬ್ರಾಕಟ್ಟೆರಸ್ತೆ ಮತ್ತು ಬೈಕೂರು ಬೈಲು ಎಂಬಲ್ಲಿ ಈಗಿರುವ ಅತೀ ಕಡಿಮೆ ವ್ಯಾಸದ ತೂಬು ಸೇತುವೆಗಳನ್ನು ತೆಗೆದು ಪಿಲ್ಲರ್ ಸೇತುವೆಗಳನ್ನು ನಿರ್ಮಾಣ ಮಾಡಬೇಕು, ಕಾರ್ಕಡ ಗ್ರಾಮದ ಕುದುರು ಮನೆ ಡ್ಯಾಮ್ ಮತ್ತು ಹೊಸಳ ಗ್ರಾಮದ ನಾಗರಮಠ ಚೆಕ್ ಡ್ಯಾಮ ಗಳಿಗೆ ಅಳವಡಿಸಿರುವ ಹಲಗೆಗಳನ್ನು ಸಂಪೂರ್ಣವಾಗಿ ತೆರವು ಮಾಡಬೇಕು. ಈ ಭಾಗದಲ್ಲಿ ಉಂಟಾಗುತ್ತಿರುವ ಕೃತಕ ನೆರೆ ಪರಿಹಾರಕ್ಕೆ ಪರಿಣತ ತಂತ್ರಜ್ಞರ ತಂಡದಿಂದ ಸರ್ವೆ ನಡೆಸಿ ಕಾಲಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು.  ಕೃತಕ ನೆರೆಯಿಂದ ಕೃಷಿ ನಷ್ಟ ಹೊಂದಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಹೇಳಿದರು.

ವಕೀಲ ಟಿ ಮಂಜುನಾಥ್, ಆರ್ ಟಿ ಐ ಕಾರ್ಯಕರ್ತ ನಾಗರಾಜ್ ಗಾಣಿಗ, ಉದ್ಯಮಿ ಸುಭಾಸ್ ಹಂಡಿಕೆರೆ, ಬೋಜು ಪೂಜಾರಿ ಗಿಳಿಯಾರು, ಹಂಡಿಕೆರೆ ರಾಘು ಶೆಟ್ಟಿ, ಸಿದ್ದ ದೇವಾಡಿಗ ಹರ್ತಟ್ಟು, ಚಂದ್ರ ಹಾಡಿಕೆರೆ, ತಿಮ್ಮ ಕಾಂಚನ್ ಹರ್ತಟ್ಟು, ನಿತ್ಯಾ ಶೆಟ್ಟಿ ಹರ್ತಟ್ಟು, ರಮೇಶ್ ಮೆಂಡನ್ ಸಾಲಿಗ್ರಾಮ, ಮಹಾಬಲ ಪೂಜಾರಿ ಹರ್ತಟ್ಟು, ಮಹೇಶ್ ಶೆಟ್ಟಿ ದ್ಯಾವುಸ, ಗಿರೀಶ್ ದೇವಾಡಿಗ ಹರ್ತಟ್ಟು, ಗಿರೀಶ್ ನಾಯ್ಕ್ ಕೋಟ, ಭಾಸ್ಕರ್ ಶೆಟ್ಟಿ ಮಣೂರು ಪಡುಕರೆ, ಸುರೇಶ್ ಪೂಜಾರಿ ಹರ್ತಟ್ಟು ಮುಂತಾದವರು ಉಪಸ್ಥಿತರಿದ್ದರು.  ಕೀರ್ತಿಶ್ ಪೂಜಾರಿ ಕೋಟ ಸ್ವಾಗತಿಸಿ, ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!