ಹಾಲಾಡಿ: ಒಮ್ಮೆಲೆ ಚಲಿಸಿದ ಬಸ್ : ಒಳಗೆ ನಿಂತಿದ್ದ ಯುವತಿ ಕುಸಿದು ಬಿದ್ದು ಗಂಭೀರ
ಕುಂದಾಪುರ: ಚಾಲಕ ಒಮ್ಮಿಂದೊಮ್ಮೆಗೇ ಬಸ್ ಚಲಾಯಿಸಿದ ಪರಿಣಾಮ ಬಸ್ಸಿನೊಳಗೆ ನಿಂತಿದ್ದ ಯುವತಿ ಕುಸಿದು ಬಿದ್ದು, ಗಂಭೀರ ಗಾಯಗೊಂಡ ಘಟನೆ ಹಾಲಾಡಿಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಉಳ್ಳೂರು 74 ಗ್ರಾಮದ ನಿವಾಸಿ ಪ್ರಜ್ಞಾ (22) ಗಂಭೀರ ಗಾಯಗೊಂಡು ಆಸ್ಪತ್ರರೆ ಸೇರಿದ ಯುವತಿ.
ಪ್ರಜ್ಞಾ ಹಾಲಾಡಿಯಿಂದ ತನ್ನ ಮನೆಗೆ ಹೋಗಲೆಂದು ಹಾಲಾಡಿ ಬಸ್ ನಿಲ್ದಾಣದಲ್ಲಿ ಖಾಸಗೀ ಬಸ್ ಏರಿದ್ದರು. ಬಸ್ ನಲ್ಲಿ ಸೀಟ್ ಇಲ್ಲದ ಕಾರಣ ನಿಂತುಕೊಂಡಿರುವಾಗ ಬಸ್ಸಿನ ಚಾಲಕನು ಬಸ್ಸನ್ನು ಚಲಾಯಿಸಿದ ಪರಿಣಾಮ ಯುವತಿ ನಿಂತುಕೊಂಡಿದ್ದ ಬಸ್ಸಿನ ತಳಭಾಗ ಕುಸಿದು ಹೋಗಿದೆ. ಆ ವೇಳೆ ಪ್ರಜ್ಞಾರವರ ಎಡಕಾಲು ಕೆಳಗೆ ಹೋಗಿ ಕಾಲಿಗೆ ಪೆಟ್ಟಾಗಿದ್ದು ಹಾಗೂ ಕುಳಿತುಕೊಳ್ಳುವ ಸೀಟಿನ ರಾಡ್ ಎದೆಗೆ ತಾಗಿ ಒಳ ನೋವು ಉಂಟಾಗಿದೆ. ತಕ್ಷಣ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸಿನ ಚಾಲಕನನ್ನು ಬಸ್ಸನ್ನು ನಿಲ್ಲಿಸಲು ಹೇಳಿದ್ದಾರೆ. ನಂತರ ಅಲ್ಲೇ ಇದ್ದ ಸ್ಥಳಿಯರು ಉಪಚರಿಸಿದ್ದರು. ಮಾರನೇ ದಿನ ಬೆಳಿಗ್ಗೆ ಎದೆ ಭಾಗಕ್ಕೆ ಹಾಗೂ ಎಡಕಾಲಿನ ನೋವು ವಿಪರೀತ ಜಾಸ್ತಿಯಾಗಿದ್ದು, ಬಳಿಕ ಕೊಟೇಶ್ವರದ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಂಕರನಾರಾಯಣ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
