ಮೋದಿ ಯೂಸ್ ಲೆಸ್, ಬೇಗ ಹೊರ ಹಾಕಿ’ : ಬಿಜೆಪಿ ನಾಯಕನಿಂದ ಆಕ್ಷೇಪಾರ್ಹ ಹೇಳಿಕೆ
ನವದೆಹಲಿ : ಬಿಜೆಪಿ ಪಕ್ಷದಲ್ಲಿದ್ದುಕೊಂಡೆ ಬಿಜೆಪಿ ನಾಯಕರನ್ನು, ಪಕ್ಷದ ಕೆಲವು ನಿರ್ಧಾರಗಳನ್ನು ಟೀಕಿಸುತ್ತಾ ಬರುತ್ತಿದ್ದ ಸುಬ್ರಮಣೆಯನ್ ಸ್ವಾಮಿ ಅವರು ಇದೀಗ ಪ್ರಧಾನಿ ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. “ಪ್ರಧಾನಿ ಮೋದಿ ಯೂಸ್ ಲೆಸ್, ಅವರನ್ನ ಹೊರಹಾಕಿ” ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ..
ಇಂಡಿಯಾ ಡೈಲಿ ಲೈವ್ ಮಂಚ್‌ನಲ್ಲಿ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, “ಪ್ರಧಾನಿ ಮೋದಿ ಏನು ಮಾಡುತ್ತಿದ್ದಾರೆ ಎಂಬುದು ನಮ್ಮ ಪಕ್ಷದ ಹಿತದೃಷ್ಟಿಯಿಂದಲ್ಲ. ಅದಕ್ಕಾಗಿಯೇ ನಾನು ಮಾತನಾಡುತ್ತೇನೆ, ಇತರರು ಹೆದರುತ್ತಾರೆ. ನನಗೆ ಭಯವಿಲ್ಲ” ಎಂದಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ ಸ್ವಾಮಿ, ಕಾಂಗ್ರೆಸ್ ಸೋಲಿಸಲು ನಾನು ಈ ಹಿಂದೆ ಮೋದಿಯವರನ್ನು ಬೆಂಬಲಿಸಿದ್ದೆ ಎಂದು ಹೇಳಿದರು. “ನಾನು ಈ ಹಿಂದೆ ಮೋದಿಗೆ ಸಹಾಯ ಮಾಡಿದ್ದೇನೆ, ಏಕೆಂದರೆ ಆ ಸಮಯದಲ್ಲಿ, ಕಾಂಗ್ರೆಸ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಸೋಲಿಸುವುದು ಅಗತ್ಯವಾಗಿತ್ತು” ಎಂದು ಅವರು ಹೇಳಿದರು.
ಸುಬ್ರಮಣಿಯನ್ ಸ್ವಾಮಿ ಅವರು ನಿಷ್ಠುರ ಹೇಳಿಕೆಗಳಿಗೆ ಹೆಸರುವಾಸಿ, ಇದೀಗ ತಮ್ಮ ನೇರ ವಿಧಾನವನ್ನು ಒತ್ತಿ ಹೇಳಿದ್ದಾರೆ. “ನಾನು ಮಧ್ಯದಲ್ಲಿ ಮಾತನಾಡುವುದಿಲ್ಲ. ನಾನು ಕಪ್ಪು ಮತ್ತು ಬಿಳಿ ಮಾತ್ರ ನೋಡುತ್ತೇನೆ. ಮೋದಿ ನಿಷ್ಟ್ರಯೋಜಕ ಎಂದು ನಾನು ಹೇಳುತ್ತೇನೆ, ಅವರನ್ನ ಹೊರಹಾಕಿ ಎಂದಿದ್ದಾರೆ.
“ನನ್ನೊಂದಿಗೆ ಉತ್ತಮವಾಗಿ ವರ್ತಿಸುವವರಿಗೆ ನಾನು ಪ್ರತಿಯಾಗಿ ಪ್ರತಿಕ್ರಿಯಿಸುತ್ತೇನೆ. ಕೆಟ್ಟದಾಗಿ ವರ್ತಿಸುವವರಿಗೆ ನಾನು ಪ್ರತೀಕಾರ ತೀರಿಸಿಕೊಳ್ಳುತ್ತೇನೆ. ತುರ್ತು ಪರಿಸ್ಥಿತಿಯ ಅವಧಿಯನ್ನ ನೆನಪಿಸಿಕೊಂಡ ಅವರು, “ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿ ತುಂಬಾ ಕೆಟ್ಟದಾಗಿ ವರ್ತಿಸಿದರು. ನನ್ನನ್ನು 20 ದಿನಗಳ ಕಾಲ ಜೈಲಿಗೆ ಕಳುಹಿಸಲಾಯಿತು” ಎಂದರು.
