BlogHighlightsHuman storiesLocal newsNatureOthersTop StoriesTrending

ಕುಂದಾಪುರ: ಯಾವ ಹುದ್ದೆಯಲ್ಲಿದ್ದರೂ ಕೃಷಿಗೆ ಪ್ರಾಮುಖ್ಯತೆ ನೀಡಿ- ದಿನಕರ್ ಶೆಟ್ಟಿ

Aware others:

ಕುಂದಾಪುರ: ನೀವು ಯಾವುದೇ ಹುದ್ದೆಯಲ್ಲಿದ್ದರೂ ಕೃಷಿಯ ಬಗ್ಗೆ ಪ್ರಾಮುಖ್ಯತೆ ನೀಡಿ. ಇದ್ದಲ್ಲೇ ಇರುವ ಅವಕಾಶಗಳನ್ನು ಬಳಸಿಕೊಂಡು ಕೃಷಿ ಮಾಡಿದರೆ ದೇಶ ಸಮೃದ್ಧವಾಗುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೃಷಿಗೆ ಉತ್ತೇಜನ ನೀಡಲೇಬೇಕಾದ ಅಗತ್ಯತೆ ಇದೆ ಎಂದು ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷ ದಿನಕರ ಶೆಟ್ಟಿ ಹೇಳಿದರು.

ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಹಾಗೂ ಕುಂದಾಪುರ ತೋಟಗಾರಿಕೆ ಇಲಾಖೆಯ ಸಹಯೋಗದೊದಿಗೆ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಥಾಪಕ ಅದ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಕುಂದಾಪುರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಮೇಳದಲ್ಲಿ ನಡೆಯುತ್ತಿರುವ ಪ್ರಯೋಜನ ಪಡೆದು ರೈತ ಮಿತ್ರ ಕೃಷಿ ವ್ಯಾಪಾರಸ್ಥರಿಗೆ ಬೆಂಬಲಿಸಬೇಕಿದೆ ಎಂದರು. ಅರುಣ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಶ್ರೀಧರ್ ಮರವಂತೆ, ಸ್ಥಾಪಕ ಅದ್ಯಕ್ಷರಾದ ಕಿರಣ್ ಕುಮಾರ್, ತೋಟಗಾರಿಕೆ ಸಹಯಕ ನಿರ್ದೇಶಕ ನಿತೇಶ್ ಕೆ.ಜೆ., ಡಾ. ಮೋಹನ್ ಕುಮಾರ್ ಬಿ, ಡಾ. ರೇವಣ್ಣನವರ್ ಬ್ರಹ್ಮವರ ಉಪಸ್ಥಿತರಿದ್ದರು.  ಸುನೀಲ್ ಕುಮಾರ್ ಶೆಟ್ಟಿ ಮಲ್ಯಾಡಿ ನಿರೂಪಿಸಿ, ಕಾರ್ಯದರ್ಶಿ ಶ್ರೀಧರ್ ಮರವಂತೆ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!