BlogCrime newsHighlightsLocal newsNational NewsObituaryOthersReligionState newsTop StoriesTrending

ಕುಂದಾಪುರ: ಕೆನರಾ ಪ್ರಾಂತ್ಯದ ಕಪುಚಿನ್ ಸಭೆಯ ಧರ್ಮಗುರು ಪ್ಯಾಟ್ರಿಕ್ ಕ್ರಾಸ್ತಾ ವಿಧಿವಶ

Aware others:

ಕುಂದಾಪುರ: ಕೆನರಾ ಪ್ರಾಂತ್ಯದ ಕಪುಚಿನ್ ಸಭೆಯ ಹಿರಿಯ ಧರ್ಮಗುರು ವಂ| ಪ್ಯಾಟ್ರಿಕ್ ಕ್ರಾಸ್ತಾ ಅವರು ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸ್ವಸ್ಥತೆಯಿಂದ 2024 ಜೂನ್ 27 ರಂದು ದೈವಾಧೀನರಾದರು.

ಅವರು ಗಂಗೊಳ್ಳಿ ಧರ್ಮಕೇಂದ್ರದ ವ್ಯಾಪ್ತಿಯಲ್ಲಿನ ಕನ್ನಡ ಕುದ್ರುವಿನ, ದಿ.ರೋಸಾರಿಯೊ ಕ್ರಾಸ್ತಾ ಮತ್ತು ದಿ.ಸಿಸಿಲಿಯಾ ಕ್ರಾಸ್ತಾ ಇವರ ಪುತ್ರನಾಗಿ 1943 ಅಕ್ಟೋಬರ್ 3 ರಂದು ಜನಿಸಿದರು. ಅವರು ಬಾಲ್ಯದಲ್ಲಿನ ಶಿಕ್ಷಣ ಗಂಗೊಳ್ಳಿಯಲ್ಲಿ ಕಲಿತು, ಅದ ನಂತರ ಅವರು ಕಪುಚಿನ್ ಸಭೆಯಲ್ಲಿ ಗುರುದೀಕ್ಷೆಯನ್ನು ಪಡೆದುಕೊಂಡರು.

ತಮ್ಮ ಧಾರ್ಮಿಕ ಜೀವನದಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿದ ಅವರು ರೋಮ್ ನಲ್ಲಿ ಬೈಬಲ್ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಕಪುಚಿನ್ ಸಭೆಯ ಕರ್ನಾಟಕ-ಗೋವಾ-ಮಹಾರಾಷ್ಟ್ರ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾಗಿದ್ದರು. ಮೈಸೂರು, ಕೃಪಾಲಯ, ಬೊಗಾಡಿ, ಶಾಂತಿ ಸದನ (FISI) ಬೆಂಗಳೂರಿನ ಶಾಂತಿ ಸಾಧನ ಕೇಂದ್ರ, ದೀನ ಸೇವಾ ಆಶ್ರಮ, ದೈವಶಾಶ್ತ್ರ ಕೇಂದ್ರದಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಅವರು 7 ಜನ ಸಹೋದರರು, ಒಬ್ಬ ಸಹೋದರಿಯನ್ನು ಹೊಂದಿದ್ದು, ಆ ಪೈಕಿ ಒಬ್ಬ ಸಹೋದರ ಫಾ.ರುಡೊಲ್ಪ್ ಎಸ್.ವಿ.ಡಿ. ಸಭೆಯ ಧರ್ಮಗುರುಗಳಾಗಿದ್ದಾರೆ. ಪ್ಯಾಟ್ರಿಕ್ ಕ್ರಾಸ್ತಾ ರ ಅಂತಿಮ ವಿಧಿವು ಜುಲೈ 1 ರಂದು ಸೋಮವಾರ ಸಂಜೆ 3 ಗಂಟೆಗೆ ಫರಂಗಿಪೇಟೆಯ ಕಪುಚಿನ್ ಗುರುಮಠದಲ್ಲಿ ಜರಗುವುದು.


Aware others:

Leave a Reply

Your email address will not be published. Required fields are marked *

error: Content is protected !!