ಹಟ್ಟಿಯಂಗಡಿ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪಾಲಕರ ಸಭೆ

ಕುಂದಾಪುರ: ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪೂರ್ವಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಾಲಕರಿಗಾಗಿ ಸಮಾಲೋಚನಾ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ, ಪ್ರಾಂಶುಪಾಲ ಶರಣ ಕುಮಾರ ಅವರು ಮಾತನಾಡಿ, “ಪಾಲಕರ ಸಹಕಾರದಿಂದ ಸಂಸ್ಥೆ ಬೆಳೆಯುತ್ತಿದೆ. ಮಕ್ಕಳ ಕಲಿಕೆಯಲ್ಲಿ ಪಾಲಕರ ಜವಾಬ್ದಾರಿ ಬಹುಮುಖ್ಯ ಪಾತ್ರವಹಿಸುತ್ತದೆ. ಶಾಲಾ ಶಿಕ್ಷಕರೊಂದಿಗೆ ಪೋಷಕರೂ ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳ ಔನ್ನತ್ಯಕ್ಕೆ ಶ್ರಮಿಸೋಣ” ಎಂದರು.
ಹಳೆವಿದ್ಯಾರ್ಥಿಗಳ ಪಾಲಕರಾದ ವಿದ್ವಾನ್ ಸತೀಶ ಭಟ್, ಸದಾನಂದ ನಾವಡ, ಜತೀಂದ್ರ, ಪ್ರದೀಪ್ ಕುಮಾರ್ ಶೆಟ್ಟಿ, ಉಜ್ವಲಾ ಪ್ರದೀಪ್ ಶೆಟ್ಟಿ, ಪ್ರತಿಮಾ ಭಟ್, ಶ್ರೀಲತಾ, ಉದಯ್ ಕುಮಾರ್ ಹಟ್ಟಿಅಂಗಡಿ ಮೊದಲಾದವರು ಶಾಲಾ ಶೈಕ್ಷಣಿಕ ಪೂರಕ ಚಟುವಟಿಕೆಗಳ ಬಗ್ಗೆ, ಮೌಲ್ಯಯುತ ಶಿಕ್ಷಣದ ಮಹತ್ವಗಳ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡರು.
ಐ.ಸಿ.ಎಸ್.ಇ. ಪಠ್ಯಕ್ರಮ, ಪರೀಕ್ಷೆಗಳು, ವಿದ್ಯಾರ್ಥಿಗಳ ಮನೆಗೆಲಸ, ವಿದ್ಯಾರ್ಥಿಗಳ ವರ್ತನೆ ಮತ್ತು ದಿನಚರಿಯ ಕುರಿತು ಶಿಕ್ಷಕಿಯರಾದ ರೂಪಾ ಜೆ., ಸ್ವಾತಿ ಶೆಟ್ಟಿ , ರೂಪಾಮಣಿ, ರೇಷ್ಮಾ ಎಂ. ಪೂರ್ಣ ಮಾಹಿತಿ ನೀಡಿದರು.
ಹಳೆ ವಿದ್ಯಾರ್ಥಿಗಳಾದ ಮಾನ್ಯ ಸಿ. ಪೂಜಾರಿ, ಕುಮಾರಿ ಸನ್ವಿ ಶೆಟ್ಟಿ, ಕುಮಾರಿ ಕೃಪಾ ಶೆಟ್ಟಿ , ಆಡಳಿತಾಧಿಕಾರಿ ವೀಣಾ ರಶ್ಮಿ ಎಂ. ಉಪ ಪ್ರಾಂಶುಪಾಲ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಫರ್ನಾಜ್, ಭಾಗ್ಯಲಕ್ಷ್ಮಿ ಹಾಗೂ ದೀಪಾ ನಿರ್ವಹಿಸಿದರು.
