BlogEconomyGovernmentHighlightsLocal newsOthersPoliticsState newsTop StoriesTrending

ಕುಂದಾಪುರ: ತೈಲ ಬೆಲೆ ಹೆಚ್ಚಳ, ಪ್ರತ್ಯೇಕ ಕಲ್ಯಾಣ ಮಂಡಳಿಗೆ ಆಗ್ರಹಿಸಿ ಸಿಪಿಐಎಂ ಕಾರ್ಮಿಕರ ಪ್ರತಿಭಟನೆ

Aware others:

ಕುಂದಾಪುರ: ತೈಲ ಬೆಲೆ ಹೆಚ್ಚಳ, ಕಟ್ಟಡ ಕಾರ್ಮಿ ಕರ ಮಕ್ಕಳ ಶೈಕ್ಷಣಿಕ ಸಹಾಯ ಧನ ಕಡಿತ, ಬೀಡಿ ಕಾರ್ಮಿ ಕರಿಗೆ 2015ರ ತುಟ್ಟಿ ಭತ್ಯೆ ಬಾಕಿ ಮತ್ತು 2024 ಎಪ್ರಿಲ್ ನಿಂದ ನೀಡಬೇಕಾದ ತುಟ್ಟಿ ಭತ್ಯೆ ಪಾವತಿ, ಆಟೊ ಚಾಲಕರೂ ಸೇರಿದಂತೆ ವಾಹನಗಳಲ್ಲಿ ಕೆಲಸ ಮಾಡುವವರಿಗೆ ಬಜೆಟ್ ನಲ್ಲಿ ಘೋಷಿಸಿದಂತೆ ಕಲ್ಯಾಣ ಮಂಡಳಿ ರಚನೆ ಮೊದಲಾದ ಬೇಡಿಕೆಗಳೊಂದಿಗೆ ಕುಂದಾಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ‌ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಜಿ.ಎಸ್.ಟಿ ಜಾರಿಗೆ ತಂದ ನಂತರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ತೀವ್ರ ಹೆಚ್ಚಳವಾಗಿದೆ. ಇದೀಗ ರಾಜ್ಯ ಸರಕಾರ ತೈಲ ಬೆಲೆ ಹೆಚ್ಚಳ ಮಾಡಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಹೆಚ್ಚಳಕ್ಕೆ ಕಾರಣವಾಗಿದೆ. ಅಲ್ಲದೇ ಕೇಂದ್ರವು ರಾಜ್ಯಗಳಿಗೆ ನೀಡಬೇಕಾದ ತೆರಿಗೆಯ ಪಾಲು, ಅನುದಾನ ಇತ್ಯಾದಿಗಳನ್ನು ಕಡಿತಗೊಳಿಸಿರುವುದರಿಂದ ರಾಜ್ಯಗಳ ಹಣಕಾಸು ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದರೆ ಪೆಟ್ರೋಲ್, ಡೀಸೆಲ್‌ ಬೆಲೆ ಹೆಚ್ಚಳ ಅದಕ್ಕೆ ಪರಿಹಾರವಲ್ಲ. ಕೂಡಲೆ ಬೆಲೆ ಹೆಚ್ಚಳವನ್ನು ರದ್ದು ಮಾಡಬೇಕೆಂದು ಸಿಪಿಐಎಂ ಜಿಲ್ಲಾ ಮುಖಂಡ ಹೆಚ್.‌ನರಸಿಂಹ ಆಗ್ರಹಿಸಿದರು.

ಬಿಸಿಯೂಟ ನೌಕರರಿಗೆ 1000ರೂ. ವೇತನ ಹೆಚ್ಚಳ ಮಾಡುವುದಾಗಿ ಹಿಂದಿನ ಸರ್ಕಾರ ತನ್ನ ಕೊನೆಯ ಬಜೆಟ್ ಮಂಡಿಸುವಾಗಲೇ ಆಶ್ವಾಸನೆ ನೀಡಿತ್ತು. ತಾವು ಅಧಿಕಾರಕ್ಕೆ ಬಂದ ನಂತರವೂ ಅದನ್ನು ಜಾರಿ ಮಾಡುವುದಾಗಿ ಒಪ್ಪಿಕೊಂಡಿದ್ದೀರಿ. ಆದರೆ ಜಾರಿ ಆಗಿಲ್ಲ. ಅವರಿಗೆ ಸಿಗುತ್ತಿರುವ ವೇತನ ತೀರಾ ಕಡಿಮೆ ಎಂಬುದು ತಮಗೆ ತಿಳಿದಿದೆ. ಅದೂ ಕೂಡಾ ಕಾಲಕಾಲಕ್ಕೆ ಅವರ ಖಾತೆಗೆ ಜಮಾ ಆಗುತ್ತಿಲ್ಲ ಎಂದು ಚಂದ್ರಶೇಖರ್ ವಿ ಆರೋಪಿಸಿದರು.

ಆಟೊ ಚಾಲಕರು ಸೇರಿದಂತೆ ಖಾಸಗಿ ವಾಣಿಜ್ಯ ವಾಹನಗಳಲ್ಲಿ ಕೆಲಸ ಮಾಡುವ ಎಲ್ಲಾ ನೌಕರರನ್ನು ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸಿ ಕಟ್ಟಡ ಕಾರ್ಮಿಕರಿಗೆ ನೀಡುವಂತೆ ವಿವಿಧ ಸವಲತ್ತುಗಳನ್ನು ನೀಡಬೇಕೆಂದು ಬಜೆಟ್ ನಲ್ಲಿ ಹಣವನ್ನೂ ತೆಗೆದಿರಿಸಿದ್ದರೂ ನಿಯಮಗಳನ್ನು ರೂಪಿಸಿಲ್ಲಸದಿರುವುದರಿಂದ ಕಾರ್ಮಿಕರಿಗೆ ಸವಲತ್ತು ಸಿಗುತ್ತಿಲ್ಲ ಎಂದು ಕಾರ್ಮಿಕ‌ ಮುಖಂಡ ಕೆ.ಶಂಕರ್ ಆರೋಪಿಸಿದರು.

ಬೀಡಿ ಕಾರ್ಮಿಕರಿಗೆ ಕಾನೂನು ಬದ್ದವಾಗಿ ನೀಡಬೇಕಾದ ಸವಲತ್ತುಗಳನ್ನು ಮಾಲಕರು ನೀಡುತ್ತಿಲ್ಲ. ಎಂದು ಆರೋಪಿಸಿದ ಪ್ರತಿಭಟನಾಕಾರರು,  2015ರ ತುಟ್ಟಿಭತ್ಯೆ ಬಾಕಿ ಮತ್ತು ವೇತನ ಪರಿಷ್ಕರಣೆ ಜಾರಿ ಮಾಡದೇ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದು, ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಲಾಯಿತು.

 2024ರಲ್ಲಿ ಎಪ್ರಿಲ್ ತಿಂಗಳಿಂದ ಹೆಚ್ಚಳವಾದ ತುಟ್ಟಿಭತ್ಯೆಯನ್ನು ಜಾರಿ ಮಾಡಿಲ್ಲ. ಬೀಡಿ ಮಾಲಕರು ಬಡವರಾಗಿಲ್ಲ. ಆದರೆ ಬಡ ಬೀಡಿ ಕಾರ್ಮಿಕರಿಗೆ ನೀಡಬೇಕಾದ ಕಾನೂನುಬದ್ಧ ಸವಲತ್ತುಗಳನ್ನು ಜಾರಿ ಮಾಡುತ್ತಿಲ್ಲ. ತಮ್ಮ ಸರಕಾರ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಲಾಯಿತು.

ಮಹಾಬಲ ವಡೇರಹೋಬಳಿ, ರಾಜು ದೇವಾಡಿಗ, ರಮೇಶ್  ವಿ., ಹಂಚು ಸಂಘದ ಮುಖಂಡರಾದ ಸುರೇಂದ್ರ, ಲಕ್ಷ್ಮಣ ಡಿ, ಪ್ರಕಾಶ್ ಕೋಣಿ, ಎಸ್.ಚಂದ್ರ ದೇವಾಡಿಗ‌ ಸೇರಿದಂತೆ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!