ಕತ್ತಲಲ್ಲಿ ಬೈಂದೂರು!: ಮೆಸ್ಕಾಂ ಸಬ್ ಸ್ಟೇಷನ್ ಮೇಲೆ ಬಿದ್ದ ಮರ
16ಕ್ಕೂ ಹೆಚ್ಚು ಕಡೆಗಳಲ್ಲಿ ಆಸ್ತಿಪಾಸ್ತಿ ನಷ್ಟ!

ಬೈಂದೂರು: ಗುರುವಾರ ಸಂಜೆ ಸುರಿದ ಭಾರೀ ಸಿಡಿಲು ಸಹಿತ ಮಳೆ ಗಾಳಿಗೆ ಬೈಂದೂರು ತಾಲೂಕಿನ ಕಹಲವು ಕಡೆ ಅನಾಹುತಗಳು ಸಂಭವಿಸಿವೆ. ಬೈಂದೂರಿನ ಮೆಸ್ಕಾಂ ಸಬ್ ಸ್ಟೇಷನ್ ಮೇಲೆ ಮರವೊಂದು ಉರುಳಿ ಬಿದ್ದಿದ್ದು, ಸಬ್ ಸ್ಟೇಷನ್ ಪುಡಿಯಾಗಿದೆ. ಪರಿಣಾಮ ಗುರುವಾರ ಸಂಜೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇಡೀ ಬೈಂದೂರು ಕಾರ್ಗತ್ತಲಲ್ಲಿ ರಾತ್ರಿ ಕಳೆದಿದೆ. ಬೈಂದೂರಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕಳವಾಡಿ ಶ್ರೀ ಮಾರಿಕಾಂಬಾ ದೇಗುಲದ ಎದುರು ಹೊಸದಾಗಿ ನಿರ್ಮಿಸಲಾದ 15 ಲಕ್ಷ ರೂ. ವೆಚ್ಚದ ಅನ್ನಛತ್ರ ನೆಲಕಚ್ಚಿದೆ. ಬೈಂದೂರು ಪೊಲೀಸ್ ಠಾಣೆಯ ಆವರಣದಲ್ಲಿ ಹಳೆ ವೃತ್ತ ನಿರೀಕ್ಷಕರ ಕಚೇರಿಯ ಮೇಲೆ ಮರ ಉರುಳಿದೆ. ಪಡುವರಿ ಗ್ರಾಮದ ದೊಂಬೆ ಕೋಟಿಮನೆ ಕೊಲ್ಲೂರಿ ಪೂಜಾರ್ತಿ ಮನೆ ಮೇಲೆ ಮರ ಬಿದ್ದಿದೆ. ಛಾವಣಿ ಕುಸಿತ, ಮರ ಉರುಳಿರುವುದು, ರಸ್ತೆ ಮೇಲೆ ವಿದ್ಯುತ್ ಕಂಬ ಉರುಳಿರುವುದು ಸೇರಿದಂತೆ ವಿವಿಧ 16ಕ್ಕೂ ಹೆಚ್ಚಿನ ಅವಘಡ ದಾಖಲಾಗಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ 👇
