ಈ ದೇಶದ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿದ್ದ ಪ್ರದಾನಿ ಮೀನು ತಿನ್ನುವುದರ ಬಗ್ಗೆ ಮಾತಾಡ್ತಾರೆ : ನಿಕೇತ್ ರಾಜ್ ಮೌರ್ಯ

ಬೈಂದೂರು : ಈ ದೇಶದ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಈ ದೇಶದ ಪ್ರಧಾನಿ ಸಮಸ್ಯೆಗಳ ಕುರಿತು ಮೌನವಹಿಸುತ್ತಾರೆ ಆದರೆ ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಆರೋಪಿಸಿದ್ದಾರೆ.
ಅವರು ಮಂಗಳವಾರ ಕಿರಿಮಂಜೇಶ್ವರದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಿವಮೋಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಪರ ಆಯೋಜಿಸಲಾದ್ದ ಮಹಿಳಾ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಹಿಂದುತ್ವ ಮಸೀದಿ, ಅಜಾನ್, ಹಿಜಾಬ್, ಹಲಾಲ್ ಕಟ್, ಮಾಂಸ, ಜಗಳ ಇಂತಹವನ್ನೇ ದೊಡ್ಡದು ಮಾಡುವ ಬಿಜೆಪಿಯ ನಾಯಕರೆನ್ನಿಸಿಕೊಂಡವರು ಮಹಿಳೆಯರ ದೌರ್ಜನ್ಯ, ಅತ್ಯಾಚಾರಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಹಿಂದೂ ಹೆಣ್ಮಕ್ಕಳ ತಾಳಿ ಕಿತ್ತು ಮುಸ್ಲಿಮರಿಗೆ ಕೊಡ್ತಾರೆ ಎನ್ನುವ ಪ್ರಧಾನಿಗೆ ಈ ಚುನಾವಣೆಯಲ್ಲಿ ಮಹಿಳೆಯರೇ ಪಾಠ ಕಲಿಸುತ್ತಾರೆ ಎಂದರು.
ಈ ದೇಶದ ಹೆಣ್ಮಕ್ಕಳ ಸಮಸ್ಯೆಗೆ ಹೆಣ್ಮಕ್ಕಳೇ ಉತ್ತರಕೊಡಬೇಕಾಗಿದೆ. ಆ ನಿಟ್ಟಿನಲ್ಲಿ ಶಿವಮೊಗ್ಗ ಬೈಂದೂರಿನ ಮಹಿಳೆಯರು ಕಾಂಗ್ರೆಸ್ಸಿನ ಮಹಿಳಾ ಅಭ್ಯರ್ಥಿ ಗೀತಾ ಶಿವರಾಜ್ ಅವರನ್ನು ಸಂಸತ್ತಿಗೆ ಕಳಿಸುತ್ತಾರೆ. ಕಾಂಗ್ರೆಸ್ ಗೆದ್ದರೆ ಅದು ಸತ್ಯ ಮತ್ತು ಧರ್ಮದ ಗೆಲುವಾಗಲಿದೆ. ಸತ್ಯ,ನ್ಯಾಯ, ಸಮಾನತೆ, ಭ್ರಾತೃತ್ವದ ಹರಿಕಾರ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನೇ ಬದಲಿಸಲು ಹೊರಟಿರುವ ಬಿಜೆಪಿಯನ್ನು ತಿರಸ್ಕರಿಸಿ ಜನರ ಬದುಕು ಕಟ್ಟಿದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.
ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ 👇
https://youtu.be/VxFllzUCmUQ?si=bVMDgh38D-zKEm8f
