BlogHighlightsLocal newsNational NewsOthersTrendingWomen Care

ಫ್ರೀ ಬಸ್ ಕೊಟ್ರೂಂತ ಹೆಣ್ಮಕ್ಳು ಎಲ್ಲೆಲ್ಲೋ ಹೋಗ್ತಾವ್ರೆ, ನನ್ನ ಹೆಂಡ್ತಿ ಎಲ್ಲೋದ್ಳು ಅಂತಾ ಗಂಡಸ್ರು ಅಳ್ತಾ ಕೂತವ್ರೆ  –  ನಟಿ ಶ್ರುತಿ

Aware others:

ರಾಜ್ಯ ಸರ್ಕಾರದ ಗ್ಯಾರೆಂಟಿಗಳ ಕುರಿತು ಶ್ರುತಿ ವ್ಯಂಗ್ಯ

ಕಿರಿಮಂಜೇಶ್ವರ: ಇಷ್ಟು ವರ್ಷಗಳ ಇತಿಹಾಸದಲ್ಲಿ ಹೆಣ್ಮಕ್ಳು ರಸ್ತೆ ನಡುವಿನಲ್ಲಿ ಗಲಾಟೆ ಮಾಡ್ಕೊಂಡಿದ್ದೇ ಇಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರದ ಫ್ರೀ ಬಸ್ ಗ್ಯಾರೆಂಟಿ ಕೊಟ್ಟ ಮೇಲೆ ಫಸ್ಟ್ ಟೈಂ ಹೆಂಗಸ್ರು ಸೀಟಿಗಾಗಿ ಜುಟ್ಟು ಜುಟ್ಟು ಹಿಡ್ಕೊಂಡು ಗಲಾಟೆ ಮಾಡ್ತಾವ್ರೆ. ತೀರ್ಥ ಯಾತ್ರೆ ನೆಪದಲ್ಲಿ ಹೆಂಗುಸ್ರು ಎಲ್ಲೆಲ್ಲೋ ಹೋಗ್ತಾವ್ರೆ. ಪಾಪ ಗಂಡಸ್ರು ಹೆಂಡ್ತೀ ಎಲ್ಲೋಗವ್ಳೆ ಅಂತಾ ಅಳ್ತಾ ಕೂತವ್ರೆ. ಎಷ್ಟೋ ಮನೆಗಳಲ್ಲಿ ಮಕ್ಳು ಉಪವಾಸ ಬಿದ್ದವ್ರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.

ನಟಿ ಶ್ರುತಿ ಮಾತನಾಡುತ್ತಿರವುದು

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ ಎಂಬಲ್ಲಿ ಹಮ್ಮಿಕೊಳ್ಳಲಾದ ಬಿಜೆಪಿ ಮಹಿಳಾ ಸಮಾವೆಶದಲ್ಲಿ ಮಾತನಾಡುತ್ತಿದ್ದರು. ಎಷ್ಟೋ ಕುಟುಂಬಗಳಲ್ಲಿ ಗಂಡಸ್ರು ಸರ್ಕಾರದ ಫ್ರೀ ಬಸ್ ಮಾಡಿರೋ ಕಾರಣ ಹೆಂಗಸ್ರು ತಿರುಗಾಡೋದ್ರಿಂದ ಮನೆಲಿ ಅನ್ನ ಇಲ್ಲ ಸ್ವಾಮಿ ಸ್ವಾಮಿ ಅಂತ ಹೇಳ್ತಿದ್ದಾರೆ. ಅವ್ರು ಕೊಡೋ 2 ಸಾವಿರ ರೂಪಾಯಿ ನಿಮ್ಮ ಕೈಯಲ್ಲಿ ಎಷ್ಟು ದಿನ ಉಳಿದಾತು? ಯಾವುದೇ ಯೋಜನೆಗಳು ಮಹಿಳೆಯರ ರಕ್ಷಣೆಗಾಗಿ ಇರ್ಬೇಕೇ ಹೊರತು ಕೇವಲ ಆಕರ್ಷಣೆಗಾಗಿ ಇರಬಾರದು ಎಂದು ಹೇಳಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!