BlogCulturalEconomyEducationElectionEntertainmentFashionHighlightsHuman storiesLifestyleLocal newsSuccess storiesTop StoriesTrending

ಸಿದ್ಧಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಜ್ಞಾನಸರಸ್ವತಿ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ

Aware others:

ಸಿದ್ಧಾಪುರ (ಕುಂದಾಪುರ): ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆನ್ನಾಬೈಲು ಇವರ ಸಹಯೋಗದಲ್ಲಿ ನಡೆದ 2026-27ನೇ ಸಾಲಿನ ಸಿದ್ಧಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಜ್ಞಾನಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

​ವಿವಿಧ ಸಾಂಸ್ಕೃತಿಕ ಹಾಗೂ ಭಾಷಾ ಸ್ಪರ್ಧೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಬಾಚಿಕೊಂಡಿದ್ದು, ವಿಜೇತರ ವಿವರ ಈ ಕೆಳಗಿನಂತಿದೆ:

ಪ್ರಥಮ ಬಹುಮಾನ ಪಡೆದ ವಿಜೇತರು

  • ​ಭರತನಾಟ್ಯ: ಪ್ರಾಪ್ತಿ ಮಡಪ್ಪಾಡಿ
  • ​ಕನ್ನಡ ಚರ್ಚಾ ಸ್ಪರ್ಧೆ: ಶಿವಾನಿ ಶೆಟ್ಟಿ
  • ​ಆಶು ಭಾಷಣ: ಶಿವಾನಿ ಶೆಟ್ಟಿ
  • ​ಭಾವಗೀತೆ: ಭೂಮಿಕಾ ಆರ್. ಆಚಾರ್ಯ
  • ​ಅರೆಬಿಕ್ ಧಾರ್ಮಿಕ ಪಠಣ: ಇಪ್ಲಾ ಸಮೀನ್
  • ​ಹಿಂದಿ ಭಾಷಣ: ಆಯಿಶಾ ತನಾಜ್
  • ​ಕವ್ವಾಲಿ: ಆದಿತ್ಯ ಡಿ.ಎಸ್ ಮತ್ತು ತಂಡ
  • ​ಸಂಸ್ಕೃತ ಧಾರ್ಮಿಕ ಪಠಣ: ಗಾಯತ್ರಿ ಸೋಮಯಾಜಿ
  • ​ಕನ್ನಡ ಭಾಷಣ: ಅನ್ವಿತಾ

ದ್ವಿತೀಯ ಬಹುಮಾನ ಪಡೆದ ವಿಜೇತರು

  • ​ಚಿತ್ರಕಲೆ: ಯುಕ್ತ
  • ​ರಸಪ್ರಶ್ನೆ: ಈರಣ್ಣ, ಶೌರ್ಯ ಶೆಟ್ಟಿ
  • ​ಜಾನಪದ ನೃತ್ಯ: ಸುಚರಿತಾ ಮತ್ತು ತಂಡ
  • ಮಿಮಿಕ್ರಿ: ದಕ್ಷಾ ಜಿ.

ತೃತೀಯ ಬಹುಮಾನ ಪಡೆದ ವಿಜೇತರು

  • ​ಜಾನಪದ ಗೀತೆ: ಭೂಮಿಕಾ ಆರ್. ಆಚಾರ್ಯ
  • ​ಇಂಗ್ಲಿಷ್ ಭಾಷಣ: ವೈಷ್ಣವಿ ಎಸ್.ಕೆ.

ವಿಜೇತ ವಿದ್ಯಾರ್ಥಿಗಳಿಗೆ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಬೋಧಕ ವೃಂದದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನವೆಂಬರ್ 30ರಂದು ತಾಲೂಕು‌ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯೂ ಜ್ಞಾನಸರಸ್ವತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.


Aware others:

Leave a Reply

Your email address will not be published. Required fields are marked *

error: Content is protected !!