ಪಾಂಡೇಶ್ವರ: ಶಾರದೋತ್ಸವದಿಂದ ಸಾಮಾಜಿಕ ಸಾಂಸ್ಕೃತಿಕ ವೇದಿಕೆ ಸಾಧ್ಯ – ಆನಂದ್ ಸಿ ಕುಂದರ್
ಕುಂದಾಪುರ: ಶಾರದೋತ್ಸವ ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ಕೆ ಸೀಮಿತಗೊಳ್ಳದೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಮೂಲಕ ವೇದಿಕೆ ಕಲ್ಪಿಸುತ್ತಿದೆ ಇದು ಪಾಂಡೇಶ್ವರ ಶಾರದೋತ್ಸವ ವೇದಿಕೆ ಸಾಕ್ಷಿ ಎಂದು ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

ಶುಕ್ರವಾರ ಕೋಟ ಅಮೃತೇಶ್ವರೀ ದೇಗುಲದಲ್ಲಿ ಪಾಂಡೇಶ್ವರ ಶಾರದೋತ್ಸವ ಸಮಿತಿ ೩೩ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ ಹಬ್ಬ ಹರಿದಿನಗಳು ಗ್ರಾಮದ ಒಗ್ಗೂಟ್ಟಿನ ಪ್ರದರ್ಶನದ ಜೊತೆಗೆ ಜನಸಮುದಾಯವನ್ನು ಧಾರ್ಮಿಕವಾಗಿ ಗಟ್ಟಿಗೊಳಿಸಲಿZ. ಈ ದಿಸೆಯಲ್ಲಿ ಶಾರದೋತ್ಸವ ಸಂಭ್ರಮದ ತೊರಣವಾಗಿ ಭಕ್ತಾದಿಗಳ ಸಮ್ಮಿಲನಕ್ಕೆ ಸಾಕ್ಷಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಚಂದ್ರ ಆಚಾರ್, ಜೀರ್ಣೋದ್ಧಾರ ಸಮಿತಿಯ ಭುಜಂಗ ಗುರಿಕಾರ,ಸಮಿತಿಯ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಉಪಾಧ್ಯಕ್ಷೆ ಲೀಲಾವತಿ ಗಂಗಾಧರ್, ಕಾರ್ಯದರ್ಶಿ ದಿನಕರ್ ಪಾಂಡೇಶ್ವರ, ಕೋಶಾಧಿಕಾರಿ ವಿಶ್ವನಾಥ ಆಚಾರ್, ಸಮಿತಿಯ ಪ್ರಮುಖರಾದ ನಾರಾಯಣ ಆಚಾರ್, ಸುಮಿತ್ರಾ ಸುಧಾಕರ್, ಕಳಿಬೈಲು ದೇಗುಲದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ, ಗಣೇಶೋತ್ಸವ ಸಮಿತಿ ಮೂಡಹಡು ಅಧ್ಯಕ್ಷ ವೆಂಕಟೇಶ ಪೂಜಾರಿ, ರವಿಕಿರಣ್ ಪೂಜಾರಿ, ಗಂಗಾಧರ ಆಚಾರ್, ಸುರೇಶ್ ಪೂಜಾರಿ ತೀರ್ಥಬೈಲ್, ಶ್ರೀಶಾ ಆಚಾರ್, ಉಷಾಗಣೇಶ್, ಜ್ಯೋತಿ, ಆಶಾ ಮತ್ತಿತರರು ಇದ್ದರು.
