BlogCulturalEducationEntertainmentFashionGovernmentHighlightsHuman storiesLifestyleLocal newsOthersState newsTop StoriesTrending

ಹಟ್ಟಿಅಂಗಡಿ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಜನ್ಮದಿನೋತ್ಸವ

Aware others:

ಕುಂದಾಪುರ: ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಯಲ್ಲಿ ಅದ್ದೂರಿಯಾಗಿ  ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಜನ್ಮದಿನೋತ್ಸವವನ್ನು ಆಚರಿಸಲಾಯಿತು. ಇವರಿಬ್ಬರ ಪ್ರತಿಕೃತಿಗಳಿಗೆ ಪುಷ್ಪಾರ್ಚನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ವಿದ್ಯಾರ್ಥಿನಿ ಕುಮಾರಿ  ಸೌಭಾಗ್ಯ ಮಹಾತ್ಮಾಗಾಂಧಿಯವರ ಜೀವನ ಪಾಠದ ಕೆಲಪುಟಗಳನ್ನು ನೆನಪಿಸುತ್ತಾ  ಶಿಸ್ತು, ಸತ್ಯನಿಷ್ಠತೆ, ಸ್ವಚ್ಛತೆ, ಅಹಿಂಸೆ, ಸರಳತೆ ಮೊದಲಾದ ಸದ್ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು. ಎಂದರು.  ಮತ್ತೊರ್ವ ವಿದ್ಯಾರ್ಥಿನಿ ಸಿಂಚನಾ ಲಾಲ್ ಬಹದ್ದೂರ್ ಶಾಸ್ತ್ರಿಗಳವರ ಜೀವನದ ಘಟನೆಗಳನ್ನು ತಿಳಿಸುತ್ತಾ ಜೈ ಜವಾನ್ ಜೈ ಕಿಸಾನ್ ಎಂಬ ಉದ್ಘೋಷಣೆಯನ್ನು ಸರ್ವರಿಗೂ ತಿಳಿಸಿದರು. ಗಾಂಧಿಯವರಿಗೆ ಪ್ರಿಯವಾದ ಭಜನೆಗಳನ್ನು ವಿದ್ಯಾರ್ಥಿಗಳು ಹಾಡಿ ಸಂಭ್ರಮಿಸಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲ ಶರಣ ಕುಮಾರ ಮಕ್ಕಳನ್ನುದ್ದೇಶಿಸಿ, ನಮ್ಮ ಜನ್ಮದಿನ ಮರೆಯಬಹುದು ಆದರೆ ಆರೇಳು ದಶಕಗಳ ಹಿಂದೆಯೇ ಮರಣ ಹೊಂದಿದ ಮಹಾತ್ಮಾಗಾಂಧಿಯ ಅಥವಾ ಶಾಸ್ತ್ರಿಗಳ ಜನ್ಮದಿನ ಆಚರಿಸುತ್ತೇವೆ.  ದೇಶಕ್ಕಾಗಿ ತ್ಯಾಗ ಮಾಡಿದ ಮಾನವಕುಲಕ್ಕೆ ಆದರ್ಶಪ್ರಾಯರಾದ ವ್ಯಕ್ತಿಗಳ ಜನ್ಮದಿನಾಚರಣೆಯ ಮೂಲಕ ನಾವು ಅವರ ಆದರ್ಶಗುಣಗಳನ್ನು ಅಳವಡಿಸಿಕೊಳ್ಳಬೇಕು. ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ತಾಳ್ಮೆ ಅತ್ಯಮೂಲ್ಯ. ತಾಳಿದವನು ಬಾಳಿಯಾನು. ಆದರ್ಶ ವ್ಯಕ್ತಿಗಳು ನಡೆದ ನುಡಿದ ಮಾರ್ಗಗಳಲ್ಲಿ ಸಾಗುವಾಗ ಬರುವ ಎಡರು ತೊಡರುಗಳಿಗೆ ಕಿವಿಗೊಡದೆ ತಾಳ್ಮೆಯಿಂದ ಸಾಧಿಸಬೇಕು. ಸದ್ಗುಣಗಳನ್ನು ಅಳವಡಿಸಿಕೊಂಡು ಸಾಗುವ ಹೆಮ್ಮೆಯ ಭಾರತೀಯರಾಗಬೇಕು. ಮಣ್ಣಲ್ಲಿಟ್ಟು ನೀರು ಗೊಬ್ಬರ ನೀಡಿ ಪೋಷಿಸಲ್ಪಡುವ ಬೀಜ ಹೇಗೆ ಆ ದಿನವೇ ಫಲ ಕೊಡಲಾರದೋ ಹಾಗೆಯೇ ಇಂದಿನ ಓದು ಇಂದೇ ಫಲ ಕೊಡಲಾರದು. ಭವ್ಯ ಭಾರತದ ಹೆಮ್ಮೆಯ ನಾಗರಿಕರೋ ನಾಯಕರೋ ಆಗಿ ಬೆಳೆಯುವ ನೀವು ಅಂದು ಉತ್ತಮವಾದ ಫಲಗಳನ್ನು ಸಮಾಜಕ್ಕೆ ನೀಡುವ ಹೆಮ್ಮರಗಳಾಗುವಿರಿ ಎಂದು ಮಕ್ಕಳ ಮನಮುಟ್ಟುವಂತೆ ತಿಳಿಹೇಳಿದರು.

ಶಾಲೆಯ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್, ಶಾಲೆಯ ಉಪಪ್ರಾಂಶುಪಾಲ ರಾಮ ದೇವಾಡಿಗ, ಶೈಕ್ಷಣಿಕ ಸಲಹೆಗಾರರಾದ ಸುಜಾತಾ ಸದಾರಾಮ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಮಾಲಿನಿ, ಶಿಕ್ಷಕ ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಶಿಕ್ಷಕ ವಿನಯ ಕುಮಾರ್ ಎಸ್ ನಿರೂಪಿಸಿ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!