AccidentAuto worldBlogHighlightsHuman storiesLifestyleLocal newsOthersState newsTop StoriesTrending

ಸಾಣೂರು: ಮಾಜೀ ಸಚಿವ ರಮಾನಾಥ ರೈ ಅವರ ಇನ್ನೋವಾ ಕಾರಿಗೆ ಖಾಸಗೀ ಬಸ್ ಡಿಕ್ಕಿ, ಒಬ್ಬ ಗಂಭೀರ, ರೈ ಸಹಿತ ನಾಲ್ವರು ಸಣ್ಣಪುಟ್ಟ ಗಾಯಗಳಿಂದ ಪಾರು!

Aware others:

ಕಾರ್ಕಳ: ಕಾರ್ಕಳದಿಂದ ಮೂಡುಬಿದಿರೆ ಮಾರ್ಗದ ಸಾಣೂರು ಎಂಬಲ್ಲಿ ನಡೆಷ ಇನ್ನೋವಾ ಕಾರು ಹಾಗುಇ ಖಾಸಗೀ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಒಬ್ಬ ಗಂಭೀರ ಗಾಯಗೊಂಡಿದ್ದು, ಮಾಜೀ ಸಚಿವ ಬಿ. ರಮಾನಾಥ ರೈ ಸಹಿತ ನಾಲ್ವರು ಸಣ್ಣ ಪುಟ್ಟ ಗಾಯಗಳಿಂದ ಪಾರಾದ‌ ಘಟನೆ ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ.

ಮಾಜಿ ಸಚಿವ ಬಿ. ರಾಮನಾಥ್ ರೈ ಅವರು ಒಬ್ಬ ಗನ್‌ಮ್ಯಾನ್ ಇಬ್ಬರು ಪಿಎಗಳು ಹಾಗೂ ಚಾಲಕನ ಜೊತೆಯಲ್ಲಿ ತಮ್ಮ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭ  ವಿಶಾಲ್ ಕಂಪನಿಯ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ರಮಾನಾಥ ರೈಗಳ ಆಪ್ತ‌ಸಹಾಯಕರಲ್ಲಿ ಒಬ್ಬರಾದ ಡೆಂಜಿಲ್ ಅವರ ಬಲಗಾಲಿನಲ್ಲಿ ಮೂಳೆ ಮುರಿತವಾಗಿದ್ದು, ಚಿಕಿತ್ಸೆಗಾಗಿ ಟಿಎಂಎ ಪೈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಮಂಗಳೂರಿನ ಯೆನಪೋಯ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು‌ ಎಂದು ಪೊಲೀಸ್‌ಮೂಲಗಳು ತಿಳಿಸಿವೆ. 

ಕಾರ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!