BlogCulturalEntertainmentFashionHighlightsHuman storiesLifestyleLocal newsPoliticsTop StoriesTrending

ಪ್ರಧಾನಿ ಮೋದಿ ಜನ್ಮದಿನ: ಕುಂದಾಪುರದಲ್ಲಿ ‘ಸೇವಾ ಸಂಕಲ್ಪ’ ಅಡಿ ಆಶೀರ್ವಾದದ ದೀಪ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಪ್ರಜ್ವಲನೆ

Aware others:

ಕುಂದಾಪುರ: ಸೆಪ್ಟೆಂಬರ್ 17 ಗುರುವಾರ ಭಾರತದ ಹೆಮ್ಮೆಯ ಪುತ್ರ, ಜಾಗತಿಕ ನಾಯಕ, ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ, ಅವರ 25 ವರ್ಷಗಳ ಸುದೀರ್ಘ ಜನಸೇವೆಯ ತಪಸ್ಸಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ “ಸೇವಾ ಸಂಕಲ್ಪ ಅಭಿಯಾನ” ದಡಿ, ಇಂದು ಸಂಜೆ ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಕೋಟೇಶ್ವರದ ಮಾರ್ಕೊಡು ಗೊಲ್ಲರ ಬೆಟ್ಟು ಶ್ಯಾಮಲ ರಮೇಶ್ ಗೊಲ್ಲ ಇವರ ನಿವಾಸದಲ್ಲಿ ‘ಆಶೀರ್ವಾದದ ದೀಪ’ ಬೆಳಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಹಾಗೂ ಕುಂದಾಪುರ ಮಂಡಲ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ಅವರ ನೇತೃತ್ವದಲ್ಲಿ ಕಾರ್ಯಕರ್ತರು ದೀಪ ಬೆಳಗಿ, ಪ್ರಧಾನಿ ಮೋದಿ ಜೀ ಅವರ ದೀರ್ಘಾಯುಷ್ಯ, ಆಯುರಾರೋಗ್ಯ ಹಾಗೂ ನಿರಂತರ ದೇಶಸೇವೆಗೆ ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ದೀಪವನ್ನು ಬೆಳಗಿಸಿ ಮಾತನಾಡಿದ ಶಾಸಕರು ರಾಷ್ಟ್ರ ಪುನರ್ನಿರ್ಮಾಣ ಮತ್ತು ಸಮಗ್ರ ವಿಕಾಸದ ಹಾದಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮೋದಿ ಜೀ ಅವರ ಆಡಳಿತವು ಪ್ರತಿಯೊಬ್ಬ ಭಾರತೀಯನಲ್ಲೂ ಆತ್ಮನಿರ್ಭರತೆ ಮತ್ತು ಸೇವಾ ಸ್ಫೂರ್ತಿಯನ್ನು ತುಂಬಿದೆ. ಸನಾತನ ಪರಂಪರೆಯ ಸಂಕೇತವಾದ ದೀಪದ ಬೆಳಕು ದೇಶದ ಮೂಲೆಮೂಲೆಗೂ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಂಡಲ ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಮಂಡಲ ಉಪಾಧ್ಯಕ್ಷರಾದ ರೂಪಾ ಬಾಬು ಪೈ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಕೋಟೇಶ್ವರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣ ಗೊಲ್ಲ,ಮಂಡಲದ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಶಕ್ತಿ ಕೇಂದ್ರ ಹಾಗೂ ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು, ಮೋದಿ ಅಭಿಮಾನಿಗಳು,, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!