ಬೈಂದೂರು ತೆಗ್ಗರ್ಸೆಯ ಯುವಕ ನಾಪತ್ತೆ – ದೂರು
ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ನಿರೋಡಿ ಎಂಬಲ್ಲಿನ ನಿವಾಸಿ ಉದಯ (29) ಎಂಬಾತ ನಾಪತ್ತೆಯಾಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಏಪ್ರಿಲ್ 8 ರಂದು ಉದಯ ಮನೆಯಿಂದ ಹೊರಗೆ ಹೋಗಿದ್ದಾರೆ. ಆದರೆ ಹಾಗೇ ಹೋದ ಉದಯ ವಾಪಾಸು ಮನೆಗೆ ಬಂದಿಲ್ಲ. ಸಂಬಂಧಿಕರ ಮನೆ ಹಾಗುಇ ಪರಿಚಯಸ್ಥರ ಬಳಿ ವಿಚಾರಿಸೊ ಯಾವುದೇ ಪ್ರಯೋಜನವಾಗಿಲ್ಲ ಎಂದ ದೂರಿನಲ್ಲಿ ತಿಳಿಸಲಾಗಿದೆ.
5 ಅಡಿ 10 ಇಂಚು ಎತ್ತರ, ಸದೃಢ ಶರೀರ, ಗೋಧಿ ಮೈಬಣ್ಣದ ಉದಯ, ಕನ್ನಡ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಯಾರಿಗಾದರೂಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-251033, ಮೊ.ನಂ: 9480805459, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ: 9480805434 ಹಾಗೂ ಕಂಟ್ರೋಲ್ ರೂಂ ನಂ:100 ಅಥವಾ 0820-2526444 ಅನ್ನು ಸಂಪರ್ಕಿಸಬಹುದಾಗಿದೆ
