Crime newsHighlightsLocal newsOthersTechTrending

ಶಿರೂರು: ಸರ್ಕಾರೀ ಶಾಲೆಯ ಹೊರಗಡೆ ಹಾಕಿದ್ದ ಸಿಸಿಟಿವಿ ಕಳವು

Aware others:

ಕುಂದಾಪುರ: ಸರ್ಕಾರೀ ಶಾಲೆಯೊಂದರ ಹೊರಾಂಗಣದಲ್ಲಿ ಅಳವಡಿಸಲಾಗಿದ್ದ 2 ಸಿಸಿಟಿವಿ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಕಳವು ಮಾಡಿಕೊಂಡು ಹೋಗಿರುವ ಘಟನೆ ಎಪ್ರಿಲ್ 10ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಬೈಂದೂರು ತಾಲೂಕಿನ ಶಿರೂರು ಗ್ರಾಮದ ಹಡವಿನಕೋಣೆ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಹೊರಾಂಗಣದಲ್ಲಿ ಶಿರೂರು ಪಂಚಾಯತ್ ನಿಂದ ನೀಡಿರುವ Zebronics ಕಂಪೆನಿಯ 2 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಎಪ್ರಿಲ್ 6ರ ಶನಿವಾರ ಸಂಜೆ ಬಾಗಿಲು ಹಾಕಿದ ಬಳಿಕ 9ನೇ ತಾರೀಖಿನ ವರೆಗೆ ಶಾಲೆಗೆ ರಜೆಯಿದ್ದು, 10ನೇ ತಾರೀಖಿಗೆ ಬಂದಾಗ ಕೆಮೆರಾ ಕಳುವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಸಿ.ಸಿ ಕ್ಯಾಮರಾಗಳ ಒಟ್ಟು ಮೌಲ್ಯ 5000 ರೂಪಾಯಿ ಎಂದು ಅಂದಾಜಿಸಲಾಗಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!