ದಲಿತ ಮುಖಂಡ ಲೋಕೇಶ್ ಅಂಚನ್ ನಿಧನ
ದಲಿತ ಹೋರಾಟದ ಮುಂಚೂಣಿ ನಾಯಕ ಕಂಚಿನಡ್ಕ ಲೋಕೇಶ್ ಅಂಚನ್(56) ಯಾನೆ ಲೋಕಯ್ಯನವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಅದಾನಿ ಯುಪಿಸಿಎಲ್ ಕಾರ್ಮಿಕ ಸಂಘಟನೆಯ ಗೌರವಾಧ್ಯಕ್ಷರಾಗಿದ್ದ ಲೋಕೆಶ್, ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಲೋಕೇಶ್ ಅಂಚನ್ ನಿಧನಕ್ಕೆ ಜಿಲ್ಲಾ ದಲಿತ ನಾಯಕರಾದ ಜಯನ್ ಮಲ್ಪೆ, ಸುಂದರ ಮಾಸ್ಟರ್, ವೈ. ಸೇಸು, ನವೀನ್‌ಚಂದ್ರ ಜೆ. ಶೆಟ್ಟಿ, ಕೃಷ್ಣ ಬಂಗೇರ, ವಿಠಲ ಮಾಸ್ಟರ್ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
