BlogCulturalEconomyEducationEntertainmentFashionHighlightsHuman storiesLifestyleLocal newsNational NewsOthersTop StoriesTrending

*ಸಿದ್ದಾಪುರ: ಸಂವಿಧಾನದ ಅಡಿಯಲ್ಲಿ ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಪಾಲಿಸಬೇಕು – ಸತೀಶ್ಚಂದ್ರ ಕಾಳಾವರ್ಕರ್  | ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಸ್ವಾತಂತ್ರ್ಯ ದಿನಾಚರಣೆ*

Aware others:

ಕುಂದಾಫುರ: ಭಾರತ ಸ್ವತಂತ್ರವಾಗುವುದರೊಂದಿಗೆ ವಿಶೇಷವಾದ ಸಂವಿಧಾನವನ್ನು ಕೊಟ್ಟಿದೆ. ಸಂವಿಧಾನದ ಆಶಯದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ತಮ್ಮದೇ ಆದ ಹಕ್ಕುಗಳಿವೆ. ಅದರ ಜೊತೆಗೆ ಕರ್ತವ್ಯಗಳನ್ನೂ ಸಂವಿಧಾನ ಕೊಟ್ಟಿದೆ. ಅದನ್ನು ಅರಿತು ನಾವೆಲ್ಲರೂ ದೇಶ ಸೇವೆಗೆ ಬದ್ಧತೆ ತೋರಿಸಬೇಕು ಎಂದು ಕುಂದಾಪುರದ ವಿಶೇಷ ಸರ್ಕಾರಿ ಅಭಿಯೋಜಕ ಸತೀಶ್ಚಂದ್ರ ಕಾಳವರ್ಕರ್ ಹೇಳಿದರು. ಅವರು ಶನಿವಾರ ಕುಂದಾಫುರ ತಾಲೂಕಿನ ಸಿದ್ಧಾಪುರದ ವಿದ್ಯಾನಗರದಲ್ಲಿರುವ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ಪ್ರವರ್ತಿತ  ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯ ಹೋರಾಟ, ರಾಷ್ಟ್ರದ ಪ್ರಗತಿಯಲ್ಲಿ ಯುವಜನರ ಪಾತ್ರ ಹಾಗೂ ದೇಶಪ್ರೇಮದ ಮಹತ್ವವನ್ನು ಅವರು ತಿಳಿಸಿದರು.

ಸುಮುಖ ಎಜುಕೇಷನಲ್ ಟ್ರಸ್ಟ್ (ರಿ)  ನ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಸುಮುಖ ಎಜುಕೇಷನಲ್ ಟ್ರಸ್ಟ್ (ರಿ)  ನ  ಕಾರ್ಯದರ್ಶಿ ಪಾಂಡುರಂಗ ಪಡಿಯಾರ್, ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ, ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಗಣೇಶ್, ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕ–ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಇದೇ ಸಂದರ್ಭ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ದೇಶಭಕ್ತಿಗೀತೆ ಸ್ಪರ್ಧೆ‍ಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.  ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕಋತಿಕ ಕಾರ್ಯಕ್ರಮಗಳು ನಡೆದವು. ಉಪನ್ಯಾಸಕ ನಾಗರಾಜ್ ಗುಳ್ಳಾಡಿ ನಿರೂಪಿಸಿ, ಉಪನ್ಯಾಸಕರಾದ ಮಂಜುನಾಥ್ ಸಿ.ಪಿ, ಸುಜನ್ ಕುಮಾರ್ , ಆದಿತ್ಯ ಎಚ್. ಆರ್, ಕಲಾ ಶಿಕ್ಷಕ ಗಿರೀಶ್ ಸಹಕರಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!