BlogCulturalEconomyEducationEntertainmentFashionHighlightsHuman storiesLifestyleLocal newsNational NewsOthersTop StoriesTrendingWomen Care

ವಿದ್ಯಾರ್ಥಿಗಳ ಮೇಲುಸ್ತುವಾರಿ ಪೋಷಕರ ಮೇಲಿದೆ – ಸೌಜನ್ಯ ಶೆಟ್ಟಿ | ಸಿದ್ಧಾಪುರದ ಸರಸ್ವತಿ ವಿದ್ಯಾಲಯದಲ್ಲಿ ಶಿಕ್ಷಕ ಪೋಷಕರ ಸಭೆ

Aware others:

ಸಿದ್ದಾಪುರ: ಮಕ್ಕಳನ್ನು ಶಾಲೆಗೆ ಕಳಿಸುವ ಪೋಷಕರು ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ನೂರಾರು ವಿದ್ಯಾರ್ಥಿಗಳಿರುವ  ಶಾಲೆಯಲ್ಲಿ ಪ್ರತೀ ಮಗುವಿನ ಬಗ್ಗೆ ಗಮನ ಹರಿಸಲಾಗುತ್ತದೆಯಾದರೂ ಪೋಷಕರು ತಮ್ಮ ಮಕ್ಕಳ ಮೇಲುಸ್ತುವಾರಿ ನಡೆಸಿದಾಗ ಮಾತ್ರ ಮಕ್ಕಳು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದು  ಡಾ. ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆ ಉಡುಪಿ ಇದರ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕಿನ ಸಿದ್ದಾಪುರದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಪೋಷಕರ–ಶಿಕ್ಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿಮಕ್ಕಳ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಶಿಕ್ಷಕರ ನಡುವಿನ ಉತ್ತಮ ಸಂವಹನ ಹಾಗೂ ಸಹಕಾರದ ಮಹತ್ವಗಳ ಬಗ್ಗೆ ಮಾತನಾಡಿದರು.

ಮುಖ್ಯಶಿಕ್ಷಕಿ ಶ್ವೇತಾ ಗಣೇಶ್ ಪ್ರಾಸ್ತಾವಿಸಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಯು ಹಮ್ಮಿಕೊಂಡಿರುವ ವಿವಿಧ ಶೈಕ್ಷಣಿಕ ಯೋಜನೆಗಳು, ಚಟುವಟಿಕೆಗಳು ಹಾಗೂ ಶಾಲಾ ನಿಯಮಾವಳಿಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿದರು. ಜ್ಞಾನಸರಸ್ವತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಉಪಸ್ಥಿತರಿದ್ದರು. ವಿದ್ಯಾಶ್ರೀ.ಕೆ.ಬಿ ಸ್ವಾಗತಿಸಿ, ಶ್ವೇತ. ಎಚ್ ನಿರೂಪಿಸಿ, ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!