BlogEconomyEducationHealthHighlightsHuman storiesLifestyleLocal newsOthersTop StoriesTrending

ಕುಂದಾಪುರ: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ ಪಡೆದುಕೊಳ್ಳಲು ಮನವಿ

Aware others:

ಕುಂದಾಪುರ ತಾಲೂಕು ಮತ್ತು ಬೈಂದೂರು ತಾಲೂಕು ಭಾಗದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ಭಾರತ ರತ್ನ ಡಾ. ಬಿ.ಆರ್‌ ಅಂಬೇಡ್ಕರ್‌ ಕಾರ್ಮಿಕ ಸೇವಾ ಕೆಂದ್ರದಿಂದ ವಿತರಣೆ ಮಾಡಲಾಗುತ್ತಿದ್ದು, ಈ ಕೆಳಕಂಡಂತೆ ತಿಳಿಸಿರುವ ಷರತ್ತುಗಳನ್ನು ಪೂರೈಸಿರುವ ನೋಂದಾಯಿತ ಕಟ್ಟಡ ಕಾರ್ಮಿಕರು  ಈ ಕೆಳಕಂಡಂತೆ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಈ ಕೆಳಕಂಡಂತೆ ತಿಳಿಸಿರುವ ಸ್ಥಳಕ್ಕೆ ಆಗಮಿಸಿ ಸುರಕ್ಷತಾ ಕಿಟ್‌ಗಳನ್ನು  ಪಡೆದುಕೊಳ್ಳುವಂತೆ ತಿಳಿಯಪಡಿಸಿದೆ.

ಲಭ್ಯವಿರುವ ಸುರಕ್ಷತಾ ಕಿಟ್‌ : ಮೇಷನ್‌, ವೆಲ್ಡರ್‌, ಕಾರ್ಪೇಂಟರ್‌, ಪೈಂಟರ್‌, ಎಲೆಕ್ಟ್ರೀಷಿಯನ್  (ಕಟ್ಟಡ ಕಾರ್ಮಿಕರ ಗುರುತಿನ ಚೀಟಿಯಲ್ಲಿ ಸದರಿ ವೃತ್ತಿಯು ನಮೂದಾಗಿರಬೇಕು)

ಷರತ್ತುಗಳು:

1) ಈ ಹಿಂದೆ ಸುರಕ್ಷತಾ ಕಿಟ್‌ ಪಡೆದವರು ಸದರಿ ಕಿಟ್‌ ಅನ್ನು ಪಡೆಯಲು ಅರ್ಹರಿರುವುದಿಲ್ಲ

2) ಸದರಿ ಸುರಕ್ಷತಾ ಕಿಟ್‌ ಅನ್ನು ಪಡೆಯಲು  ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ನೀಡಬೇಕಾದ ಅಗತ್ಯ ದಾಖಲಾತಿ:

1) ಈ ಕಾರ್ಡ್‌ ಜೆರಾಕ್ಸ್‌ ಪ್ರತಿ   (ನೋಂದಾಯಿತ ಕಟ್ಟಡ ಕಾರ್ಮಿಕರು ಮಂಡಳಿಯ ತಂತ್ರಾಂಶದಿಂದ ಕಡ್ಡಾಯವಾಗಿ ಈ – ಕಾರ್ಡ್‌ ಪಡೆದುಕೊಂಡಿರಬೇಕು  ಮತ್ತು ಸದಸ್ಯತ್ವ ಚಾಲ್ತಿಯಲ್ಲಿರಬೇಕು)

2) ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ

ಸ್ಥಳ:  ಚತುರ್ಥಿ ಹೋಟೆಲ್‌ ಪಕ್ಕ, ಬ್ಯಾಂಕ್‌ ಆಪ್‌ ಬರೋಡಾ ಎದುರುಗಡೆ, ತಲ್ಲೂರು

ದಿನಾಂಕ:30-08-2026 ಭಾನುವಾರ, ಸಮಯ : ಬೆಳಿಗ್ಗೆ 09:00 ಗಂಟೆಯಿಂದ ಸಂಜೆ 5:00 ರವರೆಗೆ

ಸಂರ್ಪಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಮಿಕ ಸೇವಾ ಪ್ರತಿನಿಧಿ –  1) 9035954606 2) 9035954605


Aware others:

Leave a Reply

Your email address will not be published. Required fields are marked *

error: Content is protected !!