ಕುಂದಾಪುರ: ಕೆಪಿಸಿಸಿ ಸಂಯೋಜಕರಾಗಿ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಆಯ್ಕೆ
ಕುಂದಾಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಯೋಜಕರಾಗಿ ಹೆಚ್. ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿಯವರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ . ಹರಿಪ್ರಸಾದ್ ಆದೇಶಿಸಿದ್ದಾರೆ. ಅವರಿಗೆ ತಕ್ಷಣದಿಂದ ಜ್ಯಾರಿಗೆ ಬರುವಂತೆ ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ASSDO ಪರಿಶೀಲನೆಯ ಜವಾಬ್ದಾರಿ ನೀಡಲಾಗಿದೆ .

ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿಯವರು ಈ ಹಿಂದೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಎನ್ಎಸ್ ಯು ಐ ಅಧ್ಯಕ್ಷರಾಗಿ, ಮಂಗಳೂರು ವಿ.ವಿ. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾದ್ಯಕ್ಷರಾಗಿ, ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಮತ್ತು ಟಿಎಪಿಸಿಎಂಎಸ್ ಲಿ . ಅಧ್ಯಕ್ಷರಾಗಿದ್ದಾರೆ.
